ಜಮೀನುಗಳಿಗೆ ಪೌತಿ ಖಾತೆ ಮಾಡಿಸುವ ಅನೇಕ ಪ್ರಕರಣಗಳು ಕರ್ನಾಟಕದಲ್ಲಿ ಬಾಕಿಯಿವೆ. ಇತ್ತೀಚೆಗೆ ಕರ್ನಾಟಕ ಸರ್ಕಾರ ಪೌತಿ ಖಾತೆಯ ಅಭಿಯಾನ ಆರಂಭಿಸಿದೆ. ಆದರೆ, ಅಭಿಯಾನ ಮಾತ್ರ ಕುಂಟುತ್ತಾ ಸಾಗುತ್ತಿದೆ. ಕೆಲವು ಕಡೆಗಳಲ್ಲಿ ಪೌತಿ ಖಾತೆಗೆ ಫೋಟೋ ದೃಢೀಕರಣ ಮಾಡುತ್ತಿಲ್ಲ ಎಂಬುದೂ ಸರ್ಕಾರಕ್ಕೆ ಗೊತ್ತಾಗಿದೆ. ಹಾಗಾಗಿ, ಪೌತಿ ಖಾತೆಗಳಿಗೆ ಫೋಟೋ ದೃಢೀಕರಣ ಕಡ್ಡಾಯಗೊಳಿಸಿ ಕಂದಾಯ ಗೊಳಿಸಿ ಸೂಚಿಸಿದೆ.
ಬೆಂಗಳೂರು: ಕಂದಾಯ ಇಲಾಖೆಯಿಂದ ಇನ್ನೂಂದು ಹೂಸ ಆದೇಶವನ್ನ ಹೂರಡಿಸಿದೆ. ಇದರಿಂದ ಜನರಿಗೆ ಆಗುವ ಅನುಕೂಲವೇನು? ಅಥಾವಾ ಈ ನಿರ್ಧಾರದಿಂದ ಕಂದಾಯ ಇಲಾಖೆಗೇನು ಉಪಯೋಗ? ಜಮೀನುಗಳಿಗೆ ಪೌತಿ ಖಾತೆ ಮಾಡಿಸುವ ಅನೇಕ ಪ್ರಕರಣಗಳು ಬಾಕಿ ಇರುವ ಕಾರಣದಿಂದ, ಇತ್ತೀಚೆಗೆ ರಾಜ್ಯ ಸರ್ಕಾರವು ಪೌತಿ ಖಾತೆಗಳನ್ನು ಮಾಡಿಸುವ ಆದೇಶ ನೀಡಿದೆ.
ಹಾಗೇ ಕೆಲಸವನ್ನು ಸುಲಭವಾಗಿಸಲು ಹೊಸತೊಂದು ಅಭಿಯಾನವನ್ನೇ ಆರಂಭಿಸಿತ್ತು. ಈಗ ರಾಜ್ಯ ಸರ್ಕಾರವು ಹೂಸ ಅಪ್ಡೇಟ್ ಕೊಟ್ಟಿದೆ. ಅದು ಫೋಟೋ ದೃಢೀಕರಣವಿಲ್ಲದೆ ʻಪೌತಿ ಖಾತೆʼ ಮಾಡುವಂತಿಲ್ಲ ಎಂದು ನಿಯಮ ಜಾರಿಮಾಡಿದೆ.
ಅಲ್ಲದೆ, ಪೌತಿ ಖಾತೆ ಅಭಿಯಾನವನ್ನು ಡಿಸೆಂಬರ್‌ನ ಕೊನೆಯ ದಿನಾಂಕದ ಒಳಗೇ ಪೂರ್ತಿಗೊಳಿಸುವಂತೆಯೂ ಎಲ್ಲಾ ತಹಸೀಲ್ದಾರ್ ಅವರಿಗೆ ಸೂಚಿಸಲಾಗಿದೆ.
ʻಪೌತಿ ಖಾತೆಯನ್ನುʼ ಜಮೀನುಗಳ ಮೂಲ ಮಾಲೀಕರ ಮರಣದ ನಂತರ ಅವರ ಹೆಸರಿನಲ್ಲಿ ಮೊದಲು ಖಾತೆ ಇಲ್ಲದಿದ್ದರೆ ಅವರ ಕಾಲಾಂತ್ಯದ ನಂತರ ಈ ಖಾತೆ ಮಾಡಬಹುದಾಗಿತ್ತು. ಜಮೀನುಗಳ ಕಾನೂನುಬದ್ಧ ವಾರಸುದಾರರು ಆ ಜಮೀನುಗಳಿಗೆ ಮೊದಲು ಪೌತಿ ಖಾತೆ ಮಾಡಿಸಿಕೊಂಡು ಆನಂತರ ಆ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕು
ನಿಮ್ಮ ಪೂರ್ವಜರ ಆಸ್ತಿ ನಿಮ್ಮ ಹೆಸರಿಗೆ ಇನ್ನೂ ವರ್ಗಾವಣೆಯಾಗಿಲ್ಲವೇ? ಹಾಗಿದ್ದರೆ ನೀವು ಒಂಟಿಯಲ್ಲ. ರಾಜ್ಯದಲ್ಲಿ ಬರೋಬ್ಬರಿ 39.62 ಲಕ್ಷ ಎಕರೆ ಜಮೀನು, ಅದರ ಮೂಲ ಮಾಲೀಕರು ಮರಣ ಹೊಂದಿದ್ದರೂ, ಇಂದಿಗೂ ಅವರ ಹೆಸರಿನಲ್ಲೇ ಉಳಿದುಕೊಂಡಿದೆ.
ಈ ಬೃಹತ್ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಆರಂಭಿಸಿದ ‘ಪೌತಿ ಖಾತೆ’ ಅಭಿಯಾನವು ನಿರೀಕ್ಷಿತ ವೇಗವನ್ನು ಪಡೆದಿಲ್ಲ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮತ್ತು ನಡೆಯಬಹುದಾದ ಅಕ್ರಮಗಳಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆಯು ಇದೀಗ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಶೇ. 5ರಷ್ಟು ಗುರಿ ಮಾತ್ರ ಸಾಧನೆ, ಅಧಿಕಾರಿಗಳಿಗೆ ಸರ್ಕಾರದ ಎಚ್ಚರಿಕೆ: ರಾಜ್ಯಾದ್ಯಂತ ಮೃತರ ಹೆಸರಿನಲ್ಲಿರುವ ಒಟ್ಟು 41.62 ಲಕ್ಷ ಎಕರೆ ಜಮೀನನ್ನು ಅವರ ಕಾನೂನುಬದ್ಧ ವಾರಸುದಾರರಿಗೆ ವರ್ಗಾಯಿಸುವ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೂ ಕೇವಲ 2 ಲಕ್ಷ ಎಕರೆ ಜಮೀನಿನ ಖಾತೆ ಬದಲಾವಣೆ ಮಾತ್ರ ಸಾಧ್ಯವಾಗಿದ್ದು, ಇದು ಒಟ್ಟು ಗುರಿಯ ಕೇವಲ ಶೇ. 5ರಷ್ಟು ಮಾತ್ರ.
ಈ ನಿಧಾನಗತಿಯ ಪ್ರಗತಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಎಲ್ಲಾ ತಹಸೀಲ್ದಾರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
‘ಪೌತಿ ಖಾತೆ’ ಅಕ್ರಮಕ್ಕೆ ಫೋಟೋ ತಡೆ: ‘ಪೌತಿ ಖಾತೆ’ ಪ್ರಕ್ರಿಯೆಯಲ್ಲಿ ಕೆಲವು ಕಡೆ ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ನಕಲಿ ವ್ಯಕ್ತಿಗಳು ವಾರಸುದಾರರೆಂದು ಹೇಳಿಕೊಂಡು ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವ ಸಾಧ್ಯತೆಗಳಿದ್ದವು. ಇದನ್ನು ತಡೆಯಲು, ಕಂದಾಯ ಇಲಾಖೆಯು ಈಗ ಫೋಟೋ ದೃಢೀಕರಣವನ್ನು ಕಡ್ಡಾಯಗೊಳಿಸಿದೆ.
ಇನ್ನು ಮುಂದೆ, ನಿಜವಾದ ವಾರಸುದಾರರು ಖುದ್ದಾಗಿ ಹಾಜರಾಗಿ, ಅವರ ಫೋಟೋವನ್ನು ದಾಖಲೆಗಳೊಂದಿಗೆ ಪರಿಶೀಲಿಸಿದ ನಂತರವೇ ಖಾತೆ ಬದಲಾವಣೆ ಮಾಡಬೇಕು ಎಂದು ಸ್ಪಷ್ಟ ಆದೇಶ ನೀಡಲಾಗಿದೆ. ಭವಿಷ್ಯದಲ್ಲಿ, ಈ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.
ಪ್ರಗತಿಯಲ್ಲಿ ಭಾರೀ ತಾರತಮ್ಯ: ರಾಜ್ಯದ ಕೆಲವು ತಾಲೂಕುಗಳಲ್ಲಿ ‘ಪೌತಿ ಖಾತೆ’ ಅಭಿಯಾನ ಉತ್ತಮವಾಗಿ ನಡೆದರೆ, ಇನ್ನು ಕೆಲವು ಕಡೆ ಆಮೆಗತಿಯಲ್ಲಿ ಸಾಗಿದೆ. ಹುಬ್ಬಳ್ಳಿ, ಧಾರವಾಡ, ಶಿರಸಿ, ಜಮಖಂಡಿಯಂತಹ ತಾಲೂಕುಗಳಲ್ಲಿ ಶೇ. 25ಕ್ಕಿಂತ ಹೆಚ್ಚು ಪ್ರಗತಿ ಕಂಡುಬಂದಿದೆ. ಆದರೆ, ವಿರಾಜಪೇಟೆ, ಬೈಂದೂರು, ಆನೇಕಲ್, ಮಡಿಕೇರಿಯಂತಹ ತಾಲೂಕುಗಳಲ್ಲಿ ಶೇ. 1ಕ್ಕಿಂತ ಕಡಿಮೆ ಪ್ರಗತಿ ದಾಖಲಾಗಿದ್ದು, ಇಲ್ಲಿನ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
‘ಆಟೋ ಮ್ಯುಟೇಶನ್’ಗೆ ಸಿಎಂ ಮೆಚ್ಚುಗೆ: ‘ಪೌತಿ ಖಾತೆ’ಯಲ್ಲಿ ಹಿನ್ನಡೆಯಾಗಿದ್ದರೂ, ಇತರೆ ಖಾತೆ ಬದಲಾವಣೆ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಉತ್ತಮ ಸಾಧನೆ ಮಾಡಿದೆ. ‘ಆಟೋ ಮ್ಯುಟೇಶನ್’ ವ್ಯವಸ್ಥೆಯ ಮೂಲಕ, ಶೇ. 65ರಷ್ಟು ಪ್ರಕರಣಗಳಲ್ಲಿ ಕೇವಲ ಒಂದೇ ದಿನದಲ್ಲಿ ಖಾತೆ ಬದಲಾವಣೆ ಮಾಡಲಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಎಲ್ಲಾ ಖಾತೆಗಳಿಗೆ ಆಧಾರ್ ಸೀಡಿಂಗ್ ಮಾಡುವ ಪ್ರಕ್ರಿಯೆಯೂ ವೇಗವಾಗಿ ನಡೆಯುತ್ತಿದೆ.


























