Home ಸುದ್ದಿ ರಾಜ್ಯ ಕೇಂದ್ರ ಸಚಿವರ ಹೆಸರಲ್ಲಿ ರಾಜ್ಯಪಾಲ ಗೆಹ್ಲೋಟ್‌ಗೆ ಕರೆ, ವಂಚನೆಗೆ ಯತ್ನ

ಕೇಂದ್ರ ಸಚಿವರ ಹೆಸರಲ್ಲಿ ರಾಜ್ಯಪಾಲ ಗೆಹ್ಲೋಟ್‌ಗೆ ಕರೆ, ವಂಚನೆಗೆ ಯತ್ನ

0

ಬೆಂಗಳೂರು: ವ್ಯಕ್ತಿಯೊಬ್ಬ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸೋಗಿನಲ್ಲಿ ದೂರವಾಣಿ ಕರೆ ಮೂಲಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ವಂಚಿಸಲು ಯತ್ನಿಸಿದ್ದ ಎಂದು ರಾಜಭವನ ಮೂಲಗಳು ಮಂಗಳವಾರ ತಿಳಿಸಿವೆ.

ಅಧಿಕಾರಿಗಳ ಪ್ರಕಾರ ಮೂರು ದಿನಗಳ ಹಿಂದೆ ಸೆ. 6ರ ಶನಿವಾರ ಮಧ್ಯಾಹ್ನ ವ್ಯಕ್ತಿಯೋರ್ವನಿಂದ ರಾಜ್ಯಪಾಲರಿಗೆ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತಾನು ಧರ್ಮೇಂದ್ರ ಪ್ರಧಾನ್ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ಯಾವುದೋ ಕೆಲಸಕ್ಕೆ ಸಂಬಂಧಿಸಿದಂತೆ ಸಹಾಯ ಕೋರಿದ್ದಾನೆ.

`ಎನೋ ವ್ಯತ್ಯಾಸ ಇರುವುದನ್ನು ಗ್ರಹಿಸಿದ ರಾಜ್ಯಪಾಲರು, ಮುಂದಿನ ಕರೆ ಬರುವವರೆಗೆ ಕಾಯಲು ನಿರ್ಧರಿಸಿದರು. ಆದರೆ, ಕರೆ ಬಾರದಿದ್ದಾಗ, ಗೆಹ್ಲೋಟ್ ಕೇಂದ್ರ ಸಚಿವರ ಕಚೇರಿಯನ್ನು ಸಂಪರ್ಕಿಸಿ ಪರಿಶೀಲಿಸಿದ್ದಾರೆ. ಆಗ ಅವರು, ಪ್ರಧಾನ್ ಅವರು ಅಂತಹ ಯಾವುದೇ ಕರೆ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.’

ಇದಾದ ಬಳಿಕ ರಾಜ್ಯಪಾಲರು ತಮ್ಮ ವ್ಯಾಪ್ತಿಯ ಪೊಲೀಸ್ ಉಪ ಆಯುಕ್ತರಿಗೆ ಮಾಹಿತಿ ನೀಡಿ, ವಿವರವಾದ ತನಿಖೆಗೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಾಥಮಿಕ ತನಿಖೆಯಲ್ಲಿ ಕರೆ ಕೋಲ್ಕತ್ತಾದಿಂದ ಬಂದಿರಬಹುದು ಎಂದು ತಿಳಿದುಬಂದಿದೆ. ವಂಚಕನ ಗುರುತನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version