ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ: ರಾಜನಾಥ್ ಸಿಂಗ್ ಭರವಸೆ

0
41

ಪಾಕ್ ಆಕ್ರಮಿತ ಕಾಶ್ಮೀರದ ಜನರು ಪಾಕ್ ಆಡಳಿತದಿಂದ ವಿಮೋಚನೆ ಬಯಸಿದ್ದಾರೆ. ನಾವು ಪಿಒಕೆ ಮರುವಶಕ್ಕೆ ಯುದ್ಧ ಮಾಡುವ ಅಗತ್ಯವಿಲ್ಲ, ಅದು ತಾನಾಗಿಯೇ ಭಾರತದೊಂದಿಗೆ ಸೇರಿಕೊಳ್ಳಲಿದೆ ಪಾಕ್ ಆಕ್ರಮಿತ ಕಾಶ್ಮೀರ ಒಂದು ದಿನ ‘ನಾನು ಭಾರತ’ ಎಂದು ಘೋಷಿಸಿಕೊಳ್ಳಲಿದೆ. ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ಮೊರಾಕ್ಕೊದಲ್ಲಿ ಅನಿವಾಸಿ ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಿ ಹೀಗೆ ಅಭಿಪ್ರಾಯಪಟ್ಟರು.

ಸಿಂಗ್ ಅವರ ಪ್ರಕಾರ, ಪಿಒಕೆ ಶಾಂತಿಯುತ ಮಾರ್ಗದಲ್ಲಿ ಭಾರತದ ಅವಿಭಾಜ್ಯ ಅಂಗವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ 2016 ರಲ್ಲಿ ಪಿಒಕೆ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗ ಎಂದು ಹೇಳಿದ್ದರು. ಪಿಒಕೆ ವಶಪಡಿಸಿಕೊಳ್ಳಲು ಭಾರತೀಯ ಸೇನೆಗೆ ಯುದ್ಧದ ಅಗತ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹಿಂದೆಯೇ ಹೇಳಿದ್ದರು. ಈಗಿನ ಪರಿಸ್ಥಿತಿಗಳು ಅವರ ಹೇಳಿಕೆಗೆ ಪೂರಕವಾಗಿವೆ ಎಂದು ತಿಳಿಸಿದರು.

5 ವರ್ಷದ ಹಿಂದೆಯೇ ಹೇಳಿದ್ರಾ ರಾಜನಾಥ್ ಸಿಂಗ್: “ಐದು ವರ್ಷಗಳ ಹಿಂದೆ ಕಾಶ್ಮೀರ ಕಣಿವೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಾನು ಭಾರತೀಯ ಸೇನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ. ಆಗಲೂ ನಾನು ಪಿಒಕೆ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ. ಈಗಿನ ಪರಿಸ್ಥಿತಿಗಳು ನನ್ನ ಹೇಳಿಕೆಗೆ ಪೂರಕವಾಗಿದ್ದು, ಪಿಒಕೆ ಶೀಘ್ರದಲ್ಲೇ ʻನಾನು ಭಾರತʼ ಎಂದು ಘೋಷಿಸಿಕೊಳ್ಳಲಿದೆ” ಎಂದಿದ್ದರು.

ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯ ವೈಫಲ್ಯದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಂಗ್,  ಪಿಒಕೆ ತಾನಾಗಿಯೇ ಭಾರತ ಸೇರಿಕೊಳ್ಳಲಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು. ವಿರೋಧ ಪಕ್ಷಗಳು ಪಾಕಿಸ್ತಾನದ ಜೆಟ್‌ಗಳನ್ನು ಹೊಡೆದುರುಳಿಸಿದ ನಂತರವೂ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರಿಂದ ಭಾರತ ಪಿಒಕೆ ವಶಪಡಿಸಿಕೊಳ್ಳುವ ಅವಕಾಶ ಕಳೆದುಕೊಂಡಿತು ಎಂದು ಆರೋಪಿಸಿದ್ದವು.ಭಾರತವು ಭಯೋತ್ಪಾದನೆ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪುನರಾರಂಭಿಸಬಹುದು ಎಂದು ಸಿಂಗ್ ಸುಳಿವು ನೀಡಿದರು.

ಆಫ್ರಿಕಾದಲ್ಲಿ ಮೊದಲ ಭಾರತೀಯ ರಕ್ಷಣಾ ಉತ್ಪಾದನಾ ಘಟಕ: ಮೊರಾಕ್ಕೊ ಭೇಟಿಯ ಸಮಯದಲ್ಲಿ, ಅವರು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ನ ವೀಲ್ಡ್ ಆರ್ಮರ್ಡ್ ಪ್ಲಾಟ್‌ಫಾರ್ಮ್ 8×8 ಗಾಗಿ ಹೊಸ ಉತ್ಪಾದನಾ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಇದು ಆಫ್ರಿಕಾದಲ್ಲಿ ಮೊದಲ ಭಾರತೀಯ ರಕ್ಷಣಾ ಉತ್ಪಾದನಾ ಘಟಕವಾಗಿದೆ. ಈ ಬೆಳವಣಿಗೆಗಳು ಭಾರತದ ರಕ್ಷಣಾ ನೀತಿ ಮತ್ತು ಪ್ರಾದೇಶಿಕ ಭದ್ರತೆಯಲ್ಲಿ ಮಹತ್ವದ ಹೆಜ್ಜೆಯಾಗಿವೆ.

Previous articleBengaluru Suburban Rail: ಭೂ ಸ್ವಾಧೀನ ಕುರಿತು ಮಹತ್ವದ ಅಪ್‌ಡೇಟ್
Next articleಸಂಸದರ ಪತ್ನಿ ಡಿಜಿಟಲ್ ಅರೆಸ್ಟ್: ಲಕ್ಷ ಲಕ್ಷ ರೂ. ಹಣ ವಂಚನೆ

LEAVE A REPLY

Please enter your comment!
Please enter your name here