Home ಸುದ್ದಿ ದೇಶ Chandrayaan 3: ರಾಷ್ಟ್ರೀಯ ಬಾಹ್ಯಾಕಾಶ ದಿನ 2025

Chandrayaan 3: ರಾಷ್ಟ್ರೀಯ ಬಾಹ್ಯಾಕಾಶ ದಿನ 2025

0

ಬೆಂಗಳೂರು: ಭಾರತದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದ ದಿನ ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲಾಗುತ್ತದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಲ್ಯಾಂಡರ್ ಇಳಿಸಿದ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಯಿತು. ಈ ಐತಿಹಾಸಿಕ ಸಾಧನೆಯನ್ನು ಸ್ಮರಿಸುವ ಸಲುವಾಗಿ ಇಂದು ಆಗಸ್ಟ್23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸಲಾಗುತ್ತದೆ.

ಮೊದಲ ರಾಷ್ಟ್ರವಾಗಿ ಭಾರತ: ಆಗಸ್ಟ್ 23, 2023 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ-3 ಮಿಷನ್ ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿಯಿತು, ಈ ಅನ್ವೇಷಿಸದ ಪ್ರದೇಶವನ್ನು ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ನಂತರ ಭಾರತವು ಈ ಸ್ಥಳವನ್ನು ಶಿವಶಕ್ತಿ ಬಿಂದು ಎಂದು ಗೊತ್ತುಪಡಿಸಿತು. ಜಾಗತಿಕ ಬಾಹ್ಯಾಕಾಶ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಆದ ಈ ದಿನ ಸದಾ ನೆನೆಪಿನಲ್ಲಿ ಇಡುವಂತೆ ಮಾಡಲು ಈ ದಿನವನ್ನು ಆಚರಿಸಲಾಗುತ್ತದೆ

ಈ ಸಾಧನೆಯು ಭಾರತವನ್ನು ಇತಿಹಾಸದಲ್ಲಿ ಯುನೈಟೆಡ್ ಸ್ಟೇಟ್ಸ್, ಸೋವಿಯತ್ ಒಕ್ಕೂಟ ಮತ್ತು ಚೀನಾ ನಂತರ ಚಂದ್ರನ ಮೇಲೆ ನಿಯಂತ್ರಿತ ಲ್ಯಾಂಡಿಂಗ್ ಮಾಡಿದ ನಾಲ್ಕನೇ ರಾಷ್ಟ್ರವನ್ನಾಗಿ ಮಾಡಿತು. ಭಾರತದ ಚಂದ್ರಯಾನ ಪ್ರಯಾಣ 2008 ರಲ್ಲಿ ಚಂದ್ರಯಾನ-1 ರೊಂದಿಗೆ ಪ್ರಾರಂಭವಾಯಿತು. ಆರ್ಬಿಟರ್ ಭಾರತವನ್ನು ಚಂದ್ರ ಪರಿಶೋಧಕರ ಸಾಲಿನಲ್ಲಿ ಇರಿಸಿದ್ದಲ್ಲದೆ, ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳು ಇರುವುದು ಎಂಬ ಪರಿವರ್ತನಾಶೀಲ ಆವಿಷ್ಕಾರವನ್ನೂ ಮಾಡಿತು.

ಮಹತ್ವದ ದಿನವಾದ ಆಗಸ್ಟ್ 23: ಇಂದಿನ ಈ ದಿನಾಂಕವು ಬಾಹ್ಯಾಕಾಶ ಗಮನಾರ್ಹ ಸಾಧನೆಯ ಹೊರತಾಗಿ ಹಲವು ವಿಧಗಳಿಂದ ನೆನೆಪಿನ ದಿನವಾಗಿದೆ. 1947 ರಲ್ಲಿ ಭಾರತದ ಮೊದಲ ಉಪಪ್ರಧಾನ ಮಂತ್ರಿಯಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇಮಕ. 1966 ರಲ್ಲಿ ಚಂದ್ರನಿಂದ ಮಾನವ ಕುಲದ ಮೊದಲ ಭೂಮಿಯ ಛಾಯಾ ಚಿತ್ರದ ಪ್ರಸರಣ ಮತ್ತು “ಸ್ಟಾಕ್ಹೋಮ್ ಸಿಂಡ್ರೋಮ್” ಎಂಬ ಪದಕ್ಕೆ ಕಾರಣವಾದ 1973 ರ ಸ್ಟಾಕ್ಹೋಮ್ನಲ್ಲಿ ಒತ್ತೆಯಾಳು ಬಿಕ್ಕಟ್ಟನ್ನು ಸಹ ನೆನಪಿಸುತ್ತದೆ.

ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕೇವಲ ಚಂದ್ರಯಾನ – 3 ಯೋಜನೆಯ ಯಶಸ್ಸಿನ ಸಂಭ್ರಮಾಚರಣೆಗೆ ಮಾತ್ರ ಸೀಮಿತ ಆಗಿಲ್ಲ. ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಗೌರವ ಸಂಪಾದಿಸಿ ಬೆಳೆದ ರೀತಿಯನ್ನೂ ಸಂಭ್ರಮಿಸುವ ದಿನವಾಗಿದೆ. ಎರಡನೇ ವರ್ಷದ ಸಂಭ್ರಮ ಆಚರಣೆಯನ್ನು ಆರ್ಯಭಟ್ಟನಿಂದ ಗಗನಯಾನ ಕಡೆ: ಪ್ರಾಚೀನ ಬುದ್ಧಿವಂತಿಕೆಯಿಂದ ಅನಂತ ಸಾಧ್ಯತೆಗಳಿಗೆ ಎಂಬ ಘೋಷ ವಾಕ್ಯದೊಂದಿಗೆ ಆಚರಿಸುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version