Home ತಾಜಾ ಸುದ್ದಿ 28 ಅಡಿ ಎತ್ತರದ ನೇತಾಜಿ ಪ್ರತಿಮೆ ಅನಾವರಣ

28 ಅಡಿ ಎತ್ತರದ ನೇತಾಜಿ ಪ್ರತಿಮೆ ಅನಾವರಣ

0

ನವದೆಹಲಿ: ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯ ಗ್ರಾನೈಟ್ ಶಿಲೆ ಮತ್ತೊಮ್ಮೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿನುಗಲಿದೆ. ದೆಹಲಿಯ ನ್ಯಾಷನಲ್ ಪೊಲೀಸ್ ಮೆಮೊರಿಯಲ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸಮಾಧಿ ಮೇಲೆ ಈಗಾಗಲೇ ಮಿನುಗುತ್ತಿರುವ ಖಮ್ಮಮ್ ಗ್ರಾನೈಟ್ ಈಗ ಇಂಡಿಯಾ ಗೇಟ್​ನಲ್ಲೂ ಕಾಣಿಸಲಿದೆ.

ಹೌದು, ತೆಲಂಗಾಣದ ಶಿಲೆಯಿಂದ ತಯಾರಾದ 28 ಅಡಿ ಎತ್ತರದ, ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಗುರುವಾರ) ಸಂಜೆ ಲೋಕಾರ್ಪಣೆ ಮಾಡಲಿದ್ದಾರೆ.

Exit mobile version