Home ತಾಜಾ ಸುದ್ದಿ CAA ಅಡಿಯಲ್ಲಿ 14 ಜನರಿಗೆ ಪೌರತ್ವ

CAA ಅಡಿಯಲ್ಲಿ 14 ಜನರಿಗೆ ಪೌರತ್ವ

0

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ, 2019 ಕಾಯ್ದೆ ಜಾರಿಯಾದ ಎರಡು ತಿಂಗಳ ನಂತರ, ಗೃಹ ವ್ಯವಹಾರಗಳ ಸಚಿವಾಲಯವು 14 ವ್ಯಕ್ತಿಗಳಿಗೆ ಕಾನೂನಿನಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದೆ.
ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆ, 2019 ಕಾಯ್ದೆ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವು 14 ಜನರಿಗೆ ಭಾರತದ ಪೌರತ್ವ ನೀಡಿದೆ. ಸಿಎಎ ಅಡಿಯಲ್ಲಿ ಪೌರತ್ವ ಕಲ್ಪಿಸಿರುವ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು 14 ಜನರಿಗೆ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದ್ದಾರೆ.

Exit mobile version