Home ನಮ್ಮ ಜಿಲ್ಲೆ ಉತ್ತರ ಕನ್ನಡ 3 ಕಿ.ಮೀ ಕಾಲ್ನಡಿಗೆಯಲ್ಲಿ ಶವಹೊತ್ತೊಯ್ದ ಗ್ರಾಮಸ್ಥರು; ಅಂಕೋಲಾದಲ್ಲೊಂದು ಹೃದಯ ವಿದ್ರಾಹಕ ಘಟನೆ!

3 ಕಿ.ಮೀ ಕಾಲ್ನಡಿಗೆಯಲ್ಲಿ ಶವಹೊತ್ತೊಯ್ದ ಗ್ರಾಮಸ್ಥರು; ಅಂಕೋಲಾದಲ್ಲೊಂದು ಹೃದಯ ವಿದ್ರಾಹಕ ಘಟನೆ!

0

ಕಾರವಾರ: ಗ್ರಾಮಕ್ಕೆ ರಸ್ತೆ‌ ಇಲ್ಲದ ಕಾರಣ ಮರಣೋತ್ತರ ಪರೀಕ್ಷೆ ಮಾಡಿದ ಶವವನ್ನು ಬಡಿಗೆಯೊಂದರಲ್ಲಿ ಕಟ್ಟಿಕೊಂಡು 3 ಕಿ.ಮೀ. ಕಾಲ್ನಡಿಗೆಯಲ್ಲಿ ಹೊತ್ತುಕೊಂಡು ಗ್ರಾಮಸ್ಥರು ಊರಿಗೆ ಸಾಗಿಸಿದ ಅಮಾನವೀಯ ಘಟನೆ ಅಂಕೋಲಾ ತಾಲೂಕಿನ ಬೆರಡೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದಾಮು ಏನು ನಾಯ್ಕ ಎಂಬುವವರು ಅಗ್ನಿಅವಘಡದಲ್ಲಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯನ್ನು ಅಂಕೋಲಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಬಳಿಕ ಅವರನ್ನು ಊರಿಗೆ ತರುವಾಗ ಹೆದ್ದಾರಿಯಿಂದ ಮೂರು ಕಿ.ಮೀ ದೂರದ ಬೆರೆಡೆ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣಕ್ಕೆ ಬಡಿಗೆಯೊಂದಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದ್ದ ಶವವನ್ನು ಕಟ್ಟಿಕೊಂಡು ಗ್ರಾಮಸ್ಥರು ಕಾಲು ಹಾದಿಯಲ್ಲಿ ಊರಿಗೆ ಸಾಗಿಸಿದ್ದಾರೆ.
ಇನ್ನು ಬೆರಡೆ ಗ್ರಾಮದಲ್ಲಿ ನೂರಾರು ಎಕರೆ ಕೃಷಿ ಜಮೀನು ಇದ್ದು ನೌಕಾನೆಲೆ ಪಕ್ಕದಲ್ಲೇ ಇರುವ ಗ್ರಾಮದ ರಸ್ತೆ ಹಲವು ವರ್ಷದ ಹಿಂದೆಯೇ ನೌಕಾನೆಲೆ ವ್ಯಾಪ್ತಿಗೆ ಒಳಪಟ್ಟಿದೆ. ಇದರಿಂದ ಗ್ರಾಮಸ್ಥರಿಗೆ ರಸ್ತೆ ಇಲ್ಲದಂತಾಗಿದೆ. ಇನ್ನು ರೈತರ ಜಮೀನು ಮಾತ್ರ ಅವರ ಹೆಸರಿನಲ್ಲಿಯೇ ಇದ್ದು ಕೃಷಿ ಮಾಡಲು ತೆರಳುವಾಗ ರಸ್ತೆ ಇಲ್ಲದೇ ಕಾಲು ದಾರಿಯಲ್ಲಿಯೇ ಸಾಗಬೇಕಾಗಿದೆ. ಊರಿನ ಬಹುತೇಕರು ಅಲಗೇರಿ, ಬಡಗೇರಿಯಲ್ಲಿ‌ ನೆಲೆಸಿದ್ದಾರೆ. ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮನೆ ಇವೆ. ಗ್ರಾಮಕ್ಕೆ ರಸ್ತೆ ಮಾಡಿಕೊಡುವಂತೆ ಹಲವು ಭಾರಿ ಮನವಿ ಮಾಡಿಕೊಂಡರು ಸ್ಪಂದನೆ ಸಿಕ್ಕಿಲ್ಲ. ಕೂಡಲೇ ಸ್ಥಳೀಯ ಹಾಲಿ ಶಾಸಕಿ ರೂಪಾಲಿ ನಾಯ್ಕ ಈ ಬಗ್ಗೆ ಗಮನ ಹರಿಸಿ ಗ್ರಾಮಕ್ಕೆ ಸೂಕ್ತ ರಸ್ತೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Exit mobile version