Home News 22ರೊಳಗಾಗಿ ಮೀಸಲಾತಿ ಘೋಷಿಸದಿದ್ದರೆ ಧರಣಿ

22ರೊಳಗಾಗಿ ಮೀಸಲಾತಿ ಘೋಷಿಸದಿದ್ದರೆ ಧರಣಿ

ಪಂಚಮಸಾಲಿ ಸಮುದಾಯಕ್ಕೆ ಆ. 22ರೊಳಗಾಗಿ ಮೀಸಲಾತಿ ಘೋಷಿಸದಿದ್ದರೆ ಶಿಗ್ಗಾಂವದಲ್ಲಿರುವ ಮುಖ್ಯಮಂತ್ರಿಗಳ ನಿವಾಸದೆದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಮಾಜಿ ಶಾಸಕ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 22ರೊಳಗೆ ವರದಿ ಪಡೆದು ಮೀಸಲಾತಿ ಬಗ್ಗೆ ತೀರ್ಮಾನ ಪ್ರಕಟಿಸುವುದಾಗಿ ಸ್ವತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದರು. ಅದರಂತೆ ಅವರಿಗೆ ಗೌರವ ನೀಡಿ ನಾವು ಕಾಯುತ್ತಿದ್ದೇವೆ. ಅಂದು ಮೀಸಲಾತಿ ಘೋಷಿಸಿದರೆ ಸಮಾಜದಿಂದ ಸನ್ಮಾನಿಸುತ್ತೇವೆ. ಇಲ್ಲದಿದ್ದರೆ ಧರಣಿ ಆರಂಭಿಸುತ್ತೇವೆ ಎಂದರು.

ಪಂಚಮಸಾಲಿ ಸಮಾಜ
Exit mobile version