Home ನಮ್ಮ ಜಿಲ್ಲೆ ಉತ್ತರ ಕನ್ನಡ 2 ಸಾವಿರ ಬಸ್ ಖರೀದಿಗೆ ಸಿಎಂ ಸಮ್ಮತಿ

2 ಸಾವಿರ ಬಸ್ ಖರೀದಿಗೆ ಸಿಎಂ ಸಮ್ಮತಿ

0

ಶಿರಸಿ: ಈಗ 2 ಸಾವಿರ ಹೊಸ ಬಸ್ ಖರೀದಿಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಅದರಲ್ಲಿ ವಾಕರಸಾ ಸಂಸ್ಥೆಗೆ 700 ಬಸ್ ನೀಡಲಾಗುತ್ತಿದ್ದು, 6 ಜಿಲ್ಲೆಗೆ ತಲಾ 100 ಬಸ್ ನೀಡಲಾಗುತ್ತದೆ. 100 ಹೆಚ್ಚುವರಿ ಬಸ್ ಅನ್ನು ಅಗತ್ಯವಿರುವ ವಿಭಾಗಕ್ಕೆ ನೀಡುವ ಮೂಲಕ ಬಸ್‌ಗಳ ಕೊರತೆ ನೀಗಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಅವರು ಶುಕ್ರವಾರ ಶಿರಸಿಯಲ್ಲಿ ಮಾಧ್ಯಮದವರೊಡನೆ ಮಾತನಾಡುತ್ತಾ, ಹೊಸ ಬಸ್‌ಗಳ ಬೇಡಿಕೆ ಬಹಳಷ್ಟಿದೆ. 2019ರಿಂದ 2023ರವರೆಗೆ ಹೊಸ ಬಸ್‌ಗಳ ಖರೀದಿಯಾಗಿಲ್ಲ. ಇದರಿಂದಾಗಿ ಹಳೆ ಬಸ್ಸಿಗೆ ಹೊಸ ರೂಪ ನೀಡಿ, ಓಡಿಸಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ನುಡಿದರು.
14 ಸಾವಿರ ಸಿಬ್ಬಂದಿ ನಿವೃತ್ತಿಯಾಗಿದ್ದಾರೆ. ಆದರೆ, ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಬಸ್ಸುಗಳ ಕೊರತೆ ನಡುವೆ ಸಿಬ್ಬಂದಿ ಕೊರತೆಯೂ ಉಂಟಾಗಿ ಸಮಸ್ಯೆಯಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರಿಗೆ ಇಲಾಖೆಯ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಾಕರಸಾ ಸಂಸ್ಥೆಗೆ 856 ಹೊಸ ಬಸ್ಸುಗಳ ಖರೀದಿ ಮಾಡಿದ್ದೇವೆ. 14 ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಅನುಕಂಪದ ಆಧಾರದ ಮೇಲೆ 1 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು.
ಹೈದ್ರಾಬಾದ್, ಬೆಂಗಳೂರು, ಪುಣೆ ಭಾಗಕ್ಕೆ ಉತ್ತರ ಕರ್ನಾಟಕ ಭಾಗದಿಂದ ಪ್ರತಿ ದಿನ 20 ರಿಂದ 30 ಬಸ್ಸುಗಳು ಸಂಚರಿಸುತ್ತಿವೆ. ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಓಡಿಸಲು ಐಷಾರಾಮಿ ಬಸ್ಸುಗಳನ್ನು ಖರೀದಿ ಮಾಡಿ, ಕೇಂದ್ರ ಕಚೇರಿಗೆ ಮೊದಲ ಹಂತದಲ್ಲಿ 30 ಬಸ್ಸುಗಳನ್ನು ನೀಡಲಾಗುತ್ತಿದೆ ಎಂದರು.

Exit mobile version