Home ನಮ್ಮ ಜಿಲ್ಲೆ ಕಲಬುರಗಿ ಒಳಮೀಸಲಾತಿ ಜಾರಿಯಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ

ಒಳಮೀಸಲಾತಿ ಜಾರಿಯಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ

0

ಜೇವರ್ಗಿ(ಕಲಬುರಗಿ): ಪರಿಶಿಷ್ಟ ವರ್ಗಗಳಿಗೆ ಒಳಮೀಸಲಾತಿಯನ್ನು ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಜಾರಿ ಮಾಡಲಿದೆ. ಒಂದು ವೇಳೆ ಜಾರಿ ಮಾಡದಿದ್ದರೆ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಅಬಕಾರಿ ಸಚಿವ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಘೋಷಣೆ ಮಾಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಾದಿಗ ಸಂಘರ್ಷ ಸಮಿತಿ ತಾಲೂಕ ಘಟಕ ಜೇವರ್ಗಿ ಮತ್ತು ಯಡ್ರಾಮಿ ವತಿಯಿಂದ ಮಾದಿಗರ ಬೃಹತ ಜನಜಾಗೃತಿ ಸಮಾವೇಶ ಹಾಗೂ ಡಾ. ಬಾಬು ಜಗಜೀವನರಾಮ್ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ, ಹಿಂದೂ ನಾವೆಲ್ಲ ಒಂದೇ ಎನ್ನುವವರು, ನಮ್ಮನ ಯಾಕೆ ದೇವಸ್ಥಾನದಲ್ಲಿ ಬಿಡುವುದಿಲ್ಲ. ನಾವು ಹಿಂದೂಗಳಲ್ಲವಾ ಎಂದು ಪ್ರಶ್ನಿಸಿದರು. ಕೇವಲ ರಾಜಕೀಯ ಮಾಡುವಾಗ ಮಾತ್ರ ಹಿಂದೂಗಳು ನಾವೇಲ್ಲರೂ ಒಂದು ಎನ್ನುತ್ತಾರೆ. ನಂತರ ನಿವ್ಯಾರೋ ನಾವ್ಯಾರೋ ಎನ್ನುತ್ತಾರೆ. ಬಸವ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದೆಯಾದಲ್ಲಿ ಅಭಿವೃದ್ದಿ ಸಾಧ್ಯವಾಗುತ್ತದೆ. ನಮ್ಮನ ಮುಟ್ಟಿಸಿಕೊಳದೆ ಗುಡಿ ಗುಂಡಾರದಲ್ಲಿ ಬಿಡದ ಸಮಯದಲ್ಲಿ ಕ್ರೈಸ್ತ್ ಮಶಿನರಿಗಳು ನಮ್ಮ ಹತ್ತಿರ ಬಂದು ನಮ್ಮನ ಅಪ್ಪಿ ಅನ್ನ, ಸ್ಥಳ ಹಾಗೂ ಶಿಕ್ಷಣವನ್ನು ನೀಡಿದ್ದಾರೆ. ಇದು ಅವರು ಮಾಡಿದ್ದು ತಪ್ಪೇ ಎಂಬ ನೋವು ತೋಡಿಕೊಂಡರು.

Exit mobile version