Home ತಾಜಾ ಸುದ್ದಿ 1,494 ಕೋಟಿ ರೂಪಾಯಿ‌ ಹಣ ದುರುಪಯೋಗ

1,494 ಕೋಟಿ ರೂಪಾಯಿ‌ ಹಣ ದುರುಪಯೋಗ

0

ಬೆಂಗಳೂರು: ಜಿಲ್ಲಾ ಮತ್ತು‌ ತಾಲೂಕು‌ ಪಂಚಾಯತ್‌ನಲ್ಲಿ ಬಾಕಿ ಉಳಿದಿರುವ 1,494 ಕೋಟಿ ರೂಪಾಯಿ‌ ಹಣ ದುರುಪಯೋಗದ ಬಗ್ಗೆ ನಮ್ಮ ವಿಧಾನಪರಿಷತ್ ಸದಸ್ಯರಾದ ಅರುಣ್ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಎಂದ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಈ ಹಣ ಎಲ್ಲಿಗೆ ಹೋಯಿತು ಎನ್ನುವ ತನಿಖೆ ನಡೆದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಜನರ ತೆರಿಗೆಯ ಹಣವನ್ನು ಹೇಗೆ ಲೂಟಿ ಹೊಡೆಯುತ್ತದೆ ಎನ್ನುವುದು ಮತ್ತೊಮ್ಮೆ ಬಹಿರಂಗವಾಗುತ್ತದೆ. ಈಗಾಗಲೇ ಮುಡಾ, ವಾಲ್ಮೀಕಿ ನಿಗಮದ ಕೋಟ್ಯಾಂತರ ರೂಪಾಯಿ ಹಗರಣ ನಡೆದರೂ ಸ್ವಪಕ್ಷದ ಹೈಕಮಾಂಡ್ ನಿಂದ ಕ್ಲೀನ್ ಚಿಟ್ ಪಡೆದಿರುವ ಸಿದ್ಧರಾಮಯ್ಯನವರು ಒಂದು ದಿನವೂ ಸಿಎಂ ಕುರ್ಚಿಯಲ್ಲಿ ಕೂರಲು ನೈತಿಕತೆ ಹೊಂದಿಲ್ಲ ಎಂದಿದ್ದಾರೆ.

Exit mobile version