Home ಸುದ್ದಿ ರಾಜ್ಯ SSLC: ಉತ್ತೀರ್ಣ ಅಂಕಗಳ ಪರಿಷ್ಕರಣೆ – ಶೇ. 33 ಅಂಕ ಪಡೆದರೆ ಪಾಸ್

SSLC: ಉತ್ತೀರ್ಣ ಅಂಕಗಳ ಪರಿಷ್ಕರಣೆ – ಶೇ. 33 ಅಂಕ ಪಡೆದರೆ ಪಾಸ್

2

ಬೆಂಗಳೂರು: 2025-26ನೇ ಸಾಲಿನಿಂದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳಲ್ಲಿ ಪಾಸ್‌ ಆಗಲು ಉತ್ತಿರ್ಣ ಅಂಕವನ್ನು 35ಕ್ಕೆ ಬದಲಾಗಿ 33ಕ್ಕೆ ನಿಗದಿ ಮಾಡಲಾಗುವುದು ಎಂದು ಕರ್ನಾಟಕ ಶಿಕ್ಷಣ ಸಚಿವ ಮಧು ಎಸ್. ಬಂಗಾರಪ್ಪ ಅವರು ಘೋಷಿಸಿದ್ದಾರೆ. ಈ ಹೊಸ ನಿರ್ಧಾರವು ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಅಭ್ಯಾಸವಾಗಲಿದೆ.

ಶುಕ್ರವಾರ ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಈ ವರ್ಷದಿಂದಲೇ 625 ಅಂಕಗಳಲ್ಲಿ 206 ಅಂಕ ಅಥವಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ 30 ಅಂಕ ಪಡೆದ ವಿದ್ಯಾರ್ಥಿಗಳನ್ನು ಪಾಸ್‌ ಎಂದು ಘೋಷಿಸಲಾಗುವುದು. ಆಂತರಿಕ ಅಂಕ ಮತ್ತು ಬಾಹ್ಯ ಅಂಕಗಳನ್ನು ಸೇರಿಸಿದ ಒಟ್ಟು ಅಂಕಗಳಲ್ಲಿ 33% ಪಡೆಯಬೇಕು. ಈ ನಿಯಮ ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆ,” ಎಂದು ತಿಳಿಸಿದರು.

ಅವರು ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ನೇಮಕ ಮಾಡಿರುವ ಮೂರು-ಮಟ್ಟದ ಪರೀಕ್ಷಾ ವ್ಯವಸ್ಥೆಯ ಕುರಿತು ವಿವರಿಸಿದರು. “ಪಾರದರ್ಶಕ ಪರೀಕ್ಷಾ ವ್ಯವಸ್ಥೆಯ ಮೂಲಕ, ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷೆಗಳನ್ನು ನೇರವಾಗಿ ನಿರೀಕ್ಷಿಸಲಾಗಿದೆ. ಕಡಿಮೆ ಅಂಕ ಬಂದ ಸಂದರ್ಭದಲ್ಲಿ ಶಿಕ್ಷಕರು ಹೊಣೆತಂದಿದ್ದಾರೆ ಮತ್ತು ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳನ್ನು ತಯಾರಿಸಿದ್ದಾರೆ. ಈ ಪ್ರಯತ್ನಗಳಿಂದ ಉತ್ತಮ ಫಲಿತಾಂಶ ಬಂದಿದೆ. ಈಗ 33% ಪಾಸಿಂಗ್‌ ಶ್ರೆಣಿಯ ಮೂಲಕ ನಿರ್ವಹಣೆಯೊಂದಿಗೆ ಇನ್ನಷ್ಟು ಸಮರ್ಥ ಪರೀಕ್ಷಾ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ,” ಎಂದರು.

ಈ ಹೊಸ ನಿಯಮವು 2025-26ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು, ರಿಪೀಟರ್ಸ್ ಮತ್ತು ಖಾಸಗಿ ಅಭ್ಯರ್ಥಿಗಳಿಗೂ ಪಾಸಿಂಗ್‌ ಶ್ರೆಣಿ 33% ಜಾರಿಗೆ ಬರುತ್ತದೆ.

2 COMMENTS

  1. ಜನಪ್ರಿಯತೆಗಾಗಿ ವಿಧ್ಯಾಭ್ಯಾಸದ ಗುಣಮಟ್ಟವನ್ನು ಹಾಳು ಮಾಡುವ ಹುನ್ನಾರ. ಈ ರೀತಿ ಕಡಿಮೆ ಜ್ಞಾನದಿಂದ ಯಾವ ನೌಕರಿಗೆ ಅರ್ಹರಾಗುತ್ತಾರೆ. ಇದು ಅಭಿವೃದ್ಧಿಗೆ ಮಾರಕ .ಇದರಿಂದ ದೇಶದ ಜ್ಞಾನ ಭಂಡಾರ ಕುಸಿಯುತ್ತಿದೆ. ಉತ್ತೀರ್ಣಕ್ಕೆ ಕನಿಷ್ಠ 50% ಮಾಡಿದರೆ ವಿದ್ಯೆಯ ಗುಣಮಟ್ಟ ಹೆಚ್ಚುತ್ತದೆ.

LEAVE A REPLY

Please enter your comment!
Please enter your name here

Exit mobile version