Home ತಾಜಾ ಸುದ್ದಿ 136 ಜನಾನೂ ಸಿಎಂ ಆಗೋಕೆ ರೆಡಿ

136 ಜನಾನೂ ಸಿಎಂ ಆಗೋಕೆ ರೆಡಿ

0

ಯಾದಗಿರಿ: ಕಾಂಗ್ರೆಸ್‌ನ ಮತ್ತೊಬ್ಬ ಸಚಿವರಿಂದ ಸಿಎಂ ಆಗುವ ಇಂಗಿತ..! ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಕ್ರೀಡಾ ಇಲಾಖೆಯಿಂದ ವಸತಿ ನಿಲಯದ ಉದ್ಘಾಟನೆ ನಂತರ ಜಿಲ್ಲಾ ಉಸ್ತುವಾರಿ ಶರಣಬಸಪ್ಪಗೌಡ ದರ್ಶಾನಪೂರ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿದರು ಹೈಕಮಾಂಡ್ ಬಯಸಿದರೆ ನಾನು ಸಿಎಂ ಆಗುತ್ತೆನೆ, ನಮ್ಮಲ್ಲಿ 136 ಜನ ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದೋರು ಇದ್ರು, ಆದರೆ 33 ಮಂದಿಗೆ ಮಂತ್ರಿ ಮಾಡಬೇಕಾದ ಅನಿವಾರ್ಯತೆ ಇತ್ತು ಅದರ ಅರ್ಥ ಯಾರೂ ಸಿಎಂ ಆಗಲು ಅರ್ಹರಲ್ಲ ಅಂತಲ್ಲ ಮುಖ್ಯಮಂತ್ರಿ ಆಗುವರು ಒಬ್ಬರೇ 153 ಜನ ಆಕಾಂಕ್ಷಿಗಳು ಇದ್ದಿರಬಹುದು ಆದರೇ ಒಬ್ಬರೇ ಸಿಎಂ ಆಗಬೇಕು ಹೈಕಮಾಂಡ್ ಬಯಸಿದ್ದರೆ ನಾನು ಸಿಎಂ ಆಗ್ತಿನಿ, ರಾಹುಲ್ ಗಾಂಧಿ, ಖರ್ಗೆ ಅವರು ಸಿಎಂ ಆಗಪ್ಪಾ ಅಂದರೆ ಯಾರು ಬೇಡ ಅಂತಾರೆ, 136 ಜನಾನೂ ಸಿಎಂ ಆಗೋಕೆ ರೆಡಿ ಇದ್ದಾರೆ ಎಂದರು.

136 ಜನಾನೂ ಸಿಎಂ ಆಗೋಕೆ ರೆಡಿ

Exit mobile version