Home ತಾಜಾ ಸುದ್ದಿ ೪೦ ಕುರಿ ಕಳ್ಳತನ

೪೦ ಕುರಿ ಕಳ್ಳತನ

0
ಸಾಂದರ್ಭಿಕ ಚಿತ್ರ

ಇಳಕಲ್ : ಇಲ್ಲಿನ ಹುಚನೂರ ರಸ್ತೆಯ ಹೊಲ ಒಂದರಲ್ಲಿ ಬೀಡು ಬಿಟ್ಟಿದ್ದ ಕುರಿಗಾಹಿಗಳ ೪೦ ಕುರಿಗಳನ್ನು ಕಳ್ಳತನ ಮಾಡಲಾಗಿದೆ.
ಯಾರೋ ಎಂಟು-ಹತ್ತು ಕಳ್ಳರು ವಾಹನವೊಂದನ್ನು ತೆಗೆದುಕೊಂಡು ಬಂದು ರಾತ್ರಿ ಎರಡು ಗಂಟೆಯ ಸುಮಾರಿಗೆ ಅದರಲ್ಲಿ ಹಾಕಿಕೊಂಡು ಹೋಗಿದ್ದಾರೆ ಕುರಿಗಳು ಚೀರಾಡುವ ಆವಾಜಿಗೆ ಎಚ್ಚರಗೊಂಡ ಕುರಿಗಾಹಿ ಹುಣಸಗಿ ತಾಲೂಕು ಮಾರನಾಳ ಗ್ರಾಮದ ದೇವಪ್ಪ ಮಾನಪ್ಪ ಪಾಳೇದಾರ ಕಳ್ಳರಿಗೆ ಒದರಿಕೊಂಡಾಗ ಗೂಡ್ಸ್ ಗಾಡಿ ತೆಗೆದುಕೊಂಡು ಕಳ್ಳರು ಕತ್ತಲಲ್ಲಿ ಮಾಯವಾಗಿದ್ದಾರೆ.
ನಾಲ್ಕು ಲಕ್ಷ ಎಂಬತ್ತು ಸಾವಿರ ರೂ ಮೌಲ್ಯದ ೪೦ ಕುರಿಗಳು ಕಳ್ಳತನ ಆದ ಬಗ್ಗೆ ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಪಿಎಸ್ ಐ ಎಸ್ ಆರ್ ನಾಯಕ ತನಿಖೆ ನಡೆಸಿದ್ದಾರೆ

Exit mobile version