Home ತಾಜಾ ಸುದ್ದಿ ಹೊರಗುತ್ತಿಗೆ ನೌಕರರ ವೇತನ: ಯತ್ನಾಳ ಪ್ರಶ್ನೆಗೆ ಮಹದೇವಪ್ಪ ಸ್ಪಷ್ಟನೆ

ಹೊರಗುತ್ತಿಗೆ ನೌಕರರ ವೇತನ: ಯತ್ನಾಳ ಪ್ರಶ್ನೆಗೆ ಮಹದೇವಪ್ಪ ಸ್ಪಷ್ಟನೆ

0

ಬೆಂಗಳೂರು: ಹೊರಗುತ್ತಿಗೆ ನೌಕರರ ವೇತನ ಪ್ರಕ್ರಿಯೆಯನ್ನು ಸರಿಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಹೊರಗುತ್ತಿಗೆ ನೌಕರರ ವೇತನ ಕುರಿತಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಾಮಜಿಕ ಜಾಲತಾಣದಲ್ಲಿನ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅವರು ಯತ್ನಾಳ್ ಅವರೇ, ಕಾನೂನು ವ್ಯಾಪ್ತಿಯಲ್ಲಿಯೇ ಹೊರಗುತ್ತಿಗೆ ನೌಕರರ ವೇತನ ಪ್ರಕ್ರಿಯೆಯನ್ನು ಸರಿಪಡಿಸಲಾಗಿದ್ದು, ತಾವುಗಳು ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುವುದು ಸೂಕ್ತ. ತಿದ್ದುಪಡಿ ಮಾಡಲಾದ ದಾಖಲೆಗಳನ್ನೂ ಇಲ್ಲಿ ನೀಡಲಾಗಿದ್ದು ಈ ಬಗ್ಗೆ ನೀವೂ ತಿಳಿಯಿರಿ ಮತ್ತು ತಿಳಿಯದವರಿಗೂ ತಿಳಿಸಿರಿ ಎಂದಿದ್ದಾರೆ.

Exit mobile version