Home ಅಪರಾಧ ಹೊಟ್ಟೆ ನೋವು: ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಹೊಟ್ಟೆ ನೋವು: ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

0

ಮುದ್ದೇಬಿಹಾಳ: ಹೊಟ್ಟೆ ನೋವು ತಾಳದೇ ವಿದ್ಯಾರ್ಥಿಯೊಬ್ಬಳು ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ತಂಗಡಗಿಯ ನೀಲಮ್ಮ ದೇವಸ್ಥಾನದ ಬಳಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಬಾಲಮ್ಮ ಕಮರಿ(೧೮) ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದವಳಾಗಿದ್ದ ಬಾಲಮ್ಮ ಇಳಕಲ್‌ನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಈಕೆ ಸೆ. ೧೪ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಅಂದು ಮಧ್ಯಾಹ್ನ ೧.೩೦ರ ಸುಮಾರು ತಂಗಡಗಿಯ ನೀಲಮ್ಮ ದೇವಿ ದೇವಸ್ಥಾನದ ಬಳಿ ಬ್ಯಾಗ್ ಮತ್ತು ಚಪ್ಪಲಿ ಬಿಟ್ಟು ನದಿಗೆ ಹಾರಿದ್ದಾಳೆ ಎನ್ನಲಾಗಿದೆ. ಅಂದು ನದಿಗೆ ಹಾರಿದ ಬಾಲಮ್ಮಳ ಶವ ಸೆ. ೧೬ರಂದು ತಾಲೂಕಿನ ಇಂಗಳಗಿಯಲ್ಲಿ ಪತ್ತೆಯಾಗಿದೆ.

Exit mobile version