ಬಾಗಲಕೋಟೆ: ಮನೆಯೊಂದರಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡಕ್ಕೆ ಸಿಲಿಂಡರ್ ಸ್ಫೋಟವಾಗಿ ಏಳೆಂಟು ಜನ ಗಾಯ ಗೊಂಡಿರುವ ಹಾಗೂ ಮನೆಮುಂದೆ ಇದ್ದ ಏಳು ಬೈಕ್ ಗಳು ಬೆಂಕಿಗೆ ಅಹು ತಿಯಾಗಿರುವ ದುರ್ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.
ಬಾಗಲಕೋಟ ಜಿಲ್ಲೆ ಕಲಾದಗಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಸಮೀಪದ ಗದ್ದನಕೇರಿ ಕ್ರಾಸ್ ನಲ್ಲಿ ಈ ಘಟನೆ ಸಂಭವಿಸಿದೆ.
ರಾಜೇಂದ್ರಪ್ರಸಾದ್ ತಪಶೆಟ್ಟಿ ಎಂಬುವರ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು ಮನೆಯ ಮೇಲ್ಬಾಗದ ಪ್ಯಾಸೆಜ್ ನಲ್ಲಿ ದೀಪಾವಳಿಯ ಹಿನ್ನೆಲೆಯಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದವರು ಹರಸಾಹಸಪಟ್ಟು ಅಗ್ನಿಯನ್ನು ಅರಿಸಿದ್ದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು ಅವಘಡವನ್ನು ನೋಡಲು ಕಟ್ಟಡದ ಆಸುಪಾಸುನಲ್ಲಿ ನಿಂತಿದ್ದ ಜನರಿಗೆ ಸಿಲಿಂಡರ್ ಸ್ಫೋಟದ ಬಿಸಿ ತಟ್ಟಿದ್ದು ಇದರಿಂದ ಮನೆಯವರು ಸೇರಿದಂತೆ ಅಸುಪಾಸಿನ 7-8ಜನರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಯಿತು ಸ್ನೇಹಾ ಮೆದಾರ( 21). ಶೃಷ್ಟಿ ಮೇದಾರ (23 ). ಐಶ್ವರ್ಯ ಮೇದಾರ( 13). ಸಚೀನ ಮೇಟಿ ( 34). ಕಲ್ಲಪ್ಪ ಲೊಕಣ್ಣನವರ(36)
ಗಣೇಶ ಶೆಟ್ಟಿ. ದಾಪುದೇವಿ ದಿಪರಮ ಪಟೇಲ (28) ಡಿಂಪಲ್ ದಿಪರಮ ಒಟೇಲ್. ಎಲ್ಲರಿಗೂ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು ಅದರಲ್ಲಿ ಬಾಗಲಕೋಟೆ ಯಲ್ಲಿ ಇಂಜಿನಿಯರಿಂಗ್ ಕೊನೆ ವರ್ಷ ದಲ್ಲಿ ಕಲಿತ್ತಿಯುರುವ ಸ್ನೆಹಾ ಮೆದಾರ ಹೆಚ್ಚಿನ ಪ್ರಮಾಣದಲ್ಲಿ ಗಾಯಗಳಾಗಿರುತ್ತವೆ.
ಇವರೆಲ್ಲಾ ಬಾಗಲಕೋಟೆಯ ಕುಮಾರೆ ಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ