Home ಅಪರಾಧ ಹೊಟೇಲ್ ರೂಮಿನಲ್ಲಿ ಕುಕ್ಕರ್ ಸ್ಫೋಟ: ಹಲವರಿಗೆ ಗಾಯ

ಹೊಟೇಲ್ ರೂಮಿನಲ್ಲಿ ಕುಕ್ಕರ್ ಸ್ಫೋಟ: ಹಲವರಿಗೆ ಗಾಯ

0

ಬೆಳಗಾವಿ: ಹೊಟೇಲ್ ರೂಮಿನಲ್ಲಿ ಅಡುಗೆ ಮಾಡಲು ಹೋಗಿ ಅಗ್ನಿ ಅನಾಹುತಕ್ಕೆ ಆಹ್ವಾನ ನೀಡಿದ ಘಟನೆ ಸವದತ್ತಿಯಲ್ಲಿ ನಡೆದಿದೆ.
ಯಾದಗಿರಿ ಮೂಲದ ಕುಟುಂಬವೊಂದು ಸವದತ್ತಿ ದೇವಿಯಲ್ಲಮ್ಮನ ದರ್ಶನಕ್ಕೆ ಆಗಮಿಸಿ ಸವದತ್ತಿಯ ಹೊಟೇಲ್‌ನಲ್ಲಿ ತಂಗಿದ್ದರು. ದೇವರಿಗೆ ಎಡೆಯಲ್ಲಿ ಬಡಿಸುವುದಕ್ಕೆ ಹೋಳಿಗೆ ಸಿದ್ಧಪಡಿಸುವುದಕ್ಕಾಗಿ ಕುಕ್ಕರ್‌ನಲ್ಲಿ ಬೇಳೆ ಬೇಯಿಸುವುದಕ್ಕೆ ಇಟ್ಟಿದ್ದಾರೆ. ಈ ವೇಳೆ ಕುಕ್ಕರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ.
ಹೊಟೇಲ್ ರೂಮಿನಿಂದ ಹೊರಗಡೆ ಭಯಂಕರ ಹೊಗೆ ಮತ್ತು ಬೆಂಕಿ ಕಂಡಿದ್ದರಿಂದ ಅಕ್ಕಪಕ್ಕದ ಜನ ತಕ್ಷಣವೇ ಅಗ್ನಿಶಾಮಕದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಹೊಟೇಲಿಗೆ ಬಂದ ಅವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಹೊಟೇಲನಲ್ಲಿದ್ದ 9 ಮಂದಿಗೆ ಬೆಂಕಿಯಿಂದ ಗಾಯ ಉಂಟಾಗಿದೆ. ಸವದತ್ತಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಹೊಟೇಲ್ ಕೊಠಡಿಯಲ್ಲಿ ಕುಕ್ಕರ್ ಇಟ್ಟು ಅಡುಗೆ ಮಾಡಲು ಹೋಗಿ ಈ ಕುಟುಂಬ ಅಪಾಯಕ್ಕೆ ಆಹ್ವಾನ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Exit mobile version