Home ಅಪರಾಧ ಹೊಂಡದಲ್ಲಿ ಕಾಲು ಸಿಲುಕಿ ಯುವಕ ಸಾವು

ಹೊಂಡದಲ್ಲಿ ಕಾಲು ಸಿಲುಕಿ ಯುವಕ ಸಾವು

0

ಬಳ್ಳಾರಿ: ನಗರದ ಹೊರವಲಯದ ಸಂಗನಕಲ್ಲು ಗುಡ್ಡದ ಹೊಂಡದಲ್ಲಿ ಯುವಕನೊಬ್ಬ ಈಜಲು ಹೋಗಿ ಮೃತಪಟ್ಟ ಘಟನೆ ಮಂಗಳವಾರ ‌ನಡೆದಿದೆ.
ಇಲ್ಲಿನ ಪಟೇಲ್ ನಗರದ ಮುನಿಸಾಯಿ(18) ಮೃತಪಟ್ಟ ಯುವಕ. ನಗರದ ಖಾಸಗಿ ಶಾಲೆಯ ಎಂಟಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಸಂತೋಷದಲ್ಲಿ ಸಮೀಪದ ಹೊಂಡದಲ್ಲಿ ಈಜಲು ತೆರಳಿದ್ದಾರೆ. ಹೊಂಡದ ಕೆಸರಿನಲ್ಲಿ ಇಬ್ಬರು ಯುವಕರು ಕಾಲು ಸಿಕ್ಕಿಬಿದ್ದಿದೆ‌. ಕೂಡಲೇ ಎಚ್ಚೆತ್ತುಕೊಂಡ ಯುವಕರು ಒಬ್ಬರನ್ನು ರಕ್ಷಿಸಿ ಪ್ರಾಣಾಪಾಯದಿಂದ‌‌ ಪಾರು ಮಾಡಿದ್ದಾರೆ‌. ಇನ್ನೊಬ್ಬ ಮೃತಪಟ್ಟಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version