Home ಅಪರಾಧ ಹೃದಯಾಘಾತ: ಬಸ್ ನಿಲ್ದಾಣದಲ್ಲೇ ವ್ಯಕ್ತಿ ಸಾವು

ಹೃದಯಾಘಾತ: ಬಸ್ ನಿಲ್ದಾಣದಲ್ಲೇ ವ್ಯಕ್ತಿ ಸಾವು

0

ಬಾಗಲಕೋಟೆ(ಇಳಕಲ್): ಮಗನನ್ನು ಮಾತನಾಡಿಸಿ ಮರಳಿ ತಮ್ಮ ಊರಿಗೆ ಹೊರಟ ವ್ಯಕ್ತಿಯೊಬ್ಬರು ಇಲ್ಲಿನ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮುದ್ದೇಬಿಹಾಳದ ಗೌಡಪ್ಪ ಸಂಗಪ್ಪ ಹೊಕ್ರಾಣಿ(೬೧) ಸೊಂಡೂರಿಗೆ ಹೋಗಿ ತಮ್ಮ ಮಗನನ್ನು ಮಾತಾಡಿಸಿ ಮರಳಿ ಇಳಕಲ್‌ಗೆ ಬಂದು ಮುದ್ದೇಬಿಹಾಳ ಬಸ್ ಹತ್ತುವ ಸಮಯದಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಪಿಎಸ್‌ಐ ಎಸ್.ಆರ್. ನಾಯಕ ಬಸ್ ನಿಲ್ದಾಣ ತೆರಳಿ ವಿಚಾರಣೆ ನಡೆಸಿದಾಗ ಮೃತರ ಮತ್ತೋರ್ವ ಪುತ್ರ ಅಮೀನಗಡ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕೆಲಸ ಮಾಡುತ್ತಿದ್ದು ಅವರನ್ನು ಕರೆಸಿ ಶವ ಹಸ್ತಾಂತರಿಸಿದ್ದಾರೆ.

Exit mobile version