Home News ಹುಬ್ಬಳ್ಳಿಯ ಕೆಲವು ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಹುಬ್ಬಳ್ಳಿಯ ಕೆಲವು ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ 33 ಕೆ.ವಿ ಸ್ಟೇಷನ್ಸ & ಲೈನ್ಸ್ ವಿಭಾಗ 33/11 ಕೆ.ವಿ. ದುಮ್ಮವಾಡ ಉಪಕೇಂದ್ರದಲ್ಲಿ ಹೆಚ್ಚುವರಿಯಾಗಿ 3 ನೇ 33/11 ಕೆ.ವಿ 5 ಎಮ್.ವಿ.ಎ ಶಕ್ತಿ ಪರಿವರ್ತಕ ಮತ್ತು ಸಂಬಂಧಿಸಿದ ಉಪಕರಣಗಳನ್ನು ಅಳವಡಿಸುವ ಕಾಮಗಾರಿ ನಿರ್ವಹಿಸಲು ಉಪಕೇಂದ್ರದ ವಿದ್ಯುತ್ ಸಂಪರ್ಕ ನಿಲುಗಡೆ ಮಾಡಲು ಕೋರಿರುವುದರಿಂದ ಏಪ್ರೀಲ್ 13 ರಿಂದ 15 ರವರೆಗೆ ಹಾಗೂ ಏಪ್ರೀಲ್ 18 ರಿಂದ 20 ರವರೆಗೆ ಒಟ್ಟು 6 ದಿನಗಳಂದು ಪ್ರತಿ ದಿನ 4 ಗಂಟೆಗಳ ಅವಧಿಯ ವಿದ್ಯುತ್ ಸಂಪರ್ಕ ನಿಲುಗಡೆ ಮಾಡಬೇಕಾಗಿರುವ ಕಾರಣ ದುಮ್ಮವಾಡ ನೀರು ಶುದ್ಧೀಕರಣ ಘಟಕದಿಂದ ನೀರು ಪೂರೈಸುವ ಹಳೇ ಹುಬ್ಬಳ್ಳಿಯ 22 ವಾರ್ಡಗಳು, ಗೋಕುಲ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿಳಂಬವಾಗಿ ನೀರು ಪೂರೈಕೆ ಮಾಡಲಾಗುವುದು ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಕಾರಣ ಸಾರ್ವಜನಿಕರು ಸಹಕರಿಸುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Exit mobile version