Home ನಮ್ಮ ಜಿಲ್ಲೆ ಕೊಪ್ಪಳ ಹುಟ್ಟೂರು ಬಿಟ್ಟು ಬದುಕುವ ಸ್ಥಿತಿ ಯಾವ ಶತ್ರುವಿಗೂ ಬರಬಾರದು

ಹುಟ್ಟೂರು ಬಿಟ್ಟು ಬದುಕುವ ಸ್ಥಿತಿ ಯಾವ ಶತ್ರುವಿಗೂ ಬರಬಾರದು

0

ಸಂಡೂರು ಕ್ಷೇತ್ರದ ಚುನಾವಣಾ ಪ್ರಚಾರ ಆರಂಭ

ಗಂಗಾವತಿ: ಹುಟ್ಟೂರು ಬಿಟ್ಟು ಬದುಕುವ ಸ್ಥಿತಿ ಯಾವ ಶತ್ರುವಿಗೂ ಬರಬಾರದು ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಗಂಗಾವತಿ ನಗರದ ಚನ್ನಬಸವಸ್ವಾಮಿ ದೇವಾಲಯದ ಬೆಳ್ಳಿ ರಥ ಎಳೆದು ಹರಕೆ ತೀರಿಸಿ ನಂತರ ಮಾದ್ಯಮಗಳೊಂದಿಗೆ ಮಾತನಾಡಿ ಬಳ್ಳಾರಿಯಲ್ಲಿ ಮತ್ತೆ ಪಕ್ಷವನ್ನು ತಳಮಟ್ಟದಿಂದ ಕಟ್ಟುತ್ತೇನೆ. ಮೊದಲಿನಂತೆ ಬಳ್ಳಾರಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ನಾಳೆಯಿಂದ ಸಂಡೂರು ಕ್ಷೇತ್ರದ ಚುನಾವಣಾ ಪ್ರಚಾರ ಆರಂಭ ಮಾಡುತ್ತೇನೆ. ಸಂಡೂರು ಕ್ಷೇತ್ರದ ಗೆಲುವಿನ ಮೂಲಕವೇ ಬಳ್ಳಾರಿ ಜಿಲ್ಲೆಯಲ್ಲಿ ಕಮಲ ಅರಳಿಸುತ್ತೇವೆ ಎಂದಿದ್ದಾರೆ. 14 ವರ್ಷಗಳ ನಂತರ ಬಳ್ಳಾರಿಗೆ ಹೋಗುತ್ತಿದ್ದೇನೆ. ಹುಟ್ಟೂರಿಗೆ ಹೋಗುತ್ತಿರುವುದು ನನಗೆ ಸಂತಸ ತಂದಿದೆ. ಗಂಗಾವತಿ ನನಗೆ ರಾಜಕೀಯ ಪುನರ್ಜನ್ಮ ನೀಡಿದೆ. ಹನುಮಂತನ ಆಶಿರ್ವಾದದಿಂದ ಬಳ್ಳಾರಿಗೆ ಹೋಗುತ್ತಿದ್ದೇನೆ ಎಂದರು.

Exit mobile version