Home ತಾಜಾ ಸುದ್ದಿ ಹಿಂದೂ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ನೀಡಿ

ಹಿಂದೂ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ನೀಡಿ

0

ಸುಹಾಸ್ ಶೆಟ್ಟಿಗೆ ಪೊಲೀಸ್ ಪೇದೆ ಪದೇ ಪದೇ ಕರೆ ಮಾಡಿದ್ದು ಯಾಕೆ ?

ಬೆಂಗಳೂರು: ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ ಅದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ

➨ಸುಹಾಸ್ ಶೆಟ್ಟರನ್ನೇ ಗುರಿಯಾಗಿಸಿಕೊಂಡು ಬಜ್ಪೆ ಪೊಲೀಸ್ ಠಾಣೆಯ ಮುಖ್ಯ ಪೇದೆ ರಶೀದ್ ಪದೇ ಪದೇ ಅವರಿಗೆ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದು ಯಾಕೆ ?

➨ಆತ್ಮರಕ್ಷಣೆಗೆ ಸುಹಾಸ್ ಅವರು ತಮ್ಮ ಕಾರಿನಲ್ಲಿ ಇಟ್ಟಿದ್ದ ಆಯುಧಗಳನ್ನು ತೆಗೆಯಬೇಕೆಂದು ಸುಹಾಸ್ ಅವರಿಗೆ ರಶೀದ್ ಆದೇಶ ನೀಡಿದ್ದು ಅಲ್ಲದೆ, ಒಂದು ವೇಳೆ ತೆಗೆಯದಿದ್ದರೆ ಕಳ್ಳತನದ ಕೇಸನ್ನು ಹಾಕುತ್ತೇನೆಂದು ಹೇಳಿರುವ ಬಗ್ಗೆ ತನಿಖೆಯಾಗಲಿ.

➨ರಶೀದ್ ಅವರ CDR (ಕಾಲ್ ಡೀಟೇಲ್ ರೆಕಾರ್ಡ್ಸ್) ಅನ್ನು ಕೂಡಲೇ ವಶಪಡಿಸಿಕೊಂಡು ರಶೀದನಿಗೆ ಯಾರು ಕರೆ ಮಾಡಿದ್ದರು, ಮೃತ ಸುಹಾಸ್ ಅವರಿಗೆ ಪದೇ ಪದೇ ಕಿರುಕುಳ ನೀಡಲು ಯಾರು ಕುಮ್ಮಕ್ಕು ನೀಡುತ್ತಿದ್ದರು ಎಂಬುದನ್ನು ತನಿಖೆಗೆ ಒಳಪಡಿಸಲಿ.

➨ಸುಹಾಸ್ ನಿರಾಯುಧರಾಗಿದ್ದರೆ ಎಂದು ರಶೀದ್ ಅವರು ಸುಹಾಸ್ ಹಂತಕರಿಗೆ ಸುಳಿವು ನೀಡಿರುವ ಬಗ್ಗೆ ತನಿಖೆಯಾಗಲಿ.

➨ಕರಾವಳಿಯಲ್ಲಿ ಸಕ್ರಿಯವಾಗಿರುವ ಹಿಂದೂ ಕಾರ್ಯಕರ್ತರಿಗೆ ಸೂಕ್ತ ಭದ್ರತೆಯನ್ನು ಪೊಲೀಸರು ನೀಡಬೇಕು. ಅವರಿಗೆ ಪ್ರಾಣ ಬೆದರಿಕೆ ಹಾಕುತ್ತಿರುವ ದುಷ್ಕರ್ಮಿಗಳು ಹಾಗೂ ಅವರ ಗ್ಯಾಂಗ್ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು.

➨ಪ್ರಾಣ ಬೆದರಿಕೆ ಇರುವ ಹಿಂದೂ ಕಾರ್ಯಕರ್ತರು ತಮ್ಮ ಹಾಗೂ ತಮ್ಮ ಪರಿವಾರದ ಸದಸ್ಯರ ಆತ್ಮರಕ್ಷಣೆಗೆ ವಾಹನದಲ್ಲಿ ಹಾಗೂ ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಲು ಪೊಲೀಸರು ಅವಕಾಶ ಕಲ್ಪಿಸಿಕೊಡಬೇಕು. ತಾಂತ್ರಿಕ ಕಾರಣವೊಡ್ಡಿ ನಿರಾಕರಿಸಬಾರದು. ಒಂದು ವೇಳೆ ನಿರಾಕಾರಿಸಿ, ಅದರಿಂದ ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ ಅದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ ಎಂದಿದ್ದಾರೆ.

Exit mobile version