ಮುಂಬೈ : ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಚಾಕು ಇರಿತದಿಂದ ಗಾಯಗೊಂಡು ಮುಂಬೈನ ಆಸ್ಪತ್ರೆಯಲ್ಲಿ ಅವರು ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ, ಕಳೆದ 6 ದಿನದಿಂದ ತೀವ್ರ ನಿಗಾ ಘಟಕದಲ್ಲಿದ್ದ ಸೈಫ್ ಅಲಿ ಖಾನ್ ಅವರು ಸದ್ಯ ಚೇತರಿಸಿಕೊಂಡಿದ್ದಾರೆ. ಇಂದು ವೈದ್ಯರ ಸಲಹೆ ಮೇರೆಗೆ ಸೈಫ್ ಅಲಿ ಖಾನ್ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜನವರಿ 16ರಂದು ಬಾಂದ್ರಾ ನಿವಾಸದಲ್ಲಿ ಸೈಫ್ ಅಲಿ ಖಾನ್ ಗೆ ಚೂರಿಯಿಂದ ಇರಿಯಲಾಗಿತ್ತು. ಬೆನ್ನುಮೂಳೆಗೆ ಆಳವಾದ ಗಾಯ ಸೇರಿದಂತೆ ಸೈಫ್ ಅಲಿ ಖಾನ್ ದೇಹದ ಮೇಲೆ 6 ಬಾರಿ ಇರಿಯಲಾಗಿತ್ತು. ಸೈಫ್ ಅಲಿ ಖಾನ್ ಗೆ ನರಶಸ್ತ್ರಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದೆ.