Home ತಾಜಾ ಸುದ್ದಿ ಸೈಟುಗಳನ್ನು ವಾಪಸ್ ನೀಡಲಿ

ಸೈಟುಗಳನ್ನು ವಾಪಸ್ ನೀಡಲಿ

0

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟರೆ ಅವರ ಸೀಟಿಗೆ ಯಾರು ಕೂಡಲಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಹೀಗಾಗಿ ಅವರು ರಾಜೀನಾಮೆ ಕೊಡಲಿ ಎಂದು ನಾನು ಹೇಳುವುದಿಲ್ಲ. ಬದಲಾಗಿ ಮುಡಾದ ಸೈಟುಗಳನ್ನು ವಾಪಸ್ ನೀಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯ ಮುಖಂಡ ಎಸ್.ಆರ್. ಹಿರೇಮಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಏನಾಗಿದೆ? ಏನಾಗಿಲ್ಲ ಎನ್ನುವ ವಾದ ಬಿಟ್ಟು, ಪಡೆದ ಎಲ್ಲ ಸೈಟುಗಳನ್ನು ಕೂಡಲೇ ವಾಪಸ್ ನೀಡಿ ತಪ್ಪು ತಿದ್ದಿಕೊಳ್ಳಬೇಕು. ಬದಲಾಗಿ ನ್ಯಾಯಾಲಯದಲ್ಲಿ ಅರ್ಜಿ ಹಾಕುವುದು, ಕಾನೂನು ಹೋರಾಟ ಮಾಡುತ್ತೇವೆ ಎನ್ನುವುದನ್ನು ಕೈ ಬಿಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಸಲಹೆಗಾರರನ್ನು ಇಟ್ಟುಕೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ಉತ್ತಮ ಸಲಹೆ ನೀಡುವವರನ್ನು ನಂಬಬೇಕೆ ವಿನಃ ದಾರಿ ತಪ್ಪಿಸುವವರಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.

Exit mobile version