Home ತಾಜಾ ಸುದ್ದಿ ಸಿದ್ಧಾರೂಢರ ಅದ್ಧೂರಿ ರಥೋತ್ಸವ…

ಸಿದ್ಧಾರೂಢರ ಅದ್ಧೂರಿ ರಥೋತ್ಸವ…

0

ಹುಬ್ಬಳ್ಳಿ: ಇಲ್ಲಿನ ಸಿದ್ದಾರೂಢ ಸ್ವಾಮಿ ವೈಭವದ ರಥೋತ್ಸವ ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಗುರುವಾರ ನೆರವೇರಿತು.

ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಸಿದ್ಧಾರೂಢ ಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲುಮುಟ್ಟಿತು. ದೇಗುಲದಿಂದ ಮುಖ್ಯದ್ವಾರದವರೆಗೆ ರಥ ಎಳೆದು, ದೇವಸ್ಥಾನಕ್ಕೆ ವಾಪಸ್ಸಾಗುವವರೆಗೆ ಭಕ್ತರು ಸಂಭ್ರಮದಿಂದ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಸಿದ್ಧಾರೂಢ ಶ್ರೀಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

Exit mobile version