Home News ಸರ್ಕಾರ ಬೀಳಿಸಲು ಬಿಜೆಪಿಯವರು ನನ್ನ ಸಂಪರ್ಕಿಸಿಲ್ಲ

ಸರ್ಕಾರ ಬೀಳಿಸಲು ಬಿಜೆಪಿಯವರು ನನ್ನ ಸಂಪರ್ಕಿಸಿಲ್ಲ

ದಾವಣಗೆರೆ: ಸರ್ಕಾರ ಬೀಳಿಸುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯವರು ಯಾರು ನನ್ನನ್ನು ಸಂಪರ್ಕ ಮಾಡಿಲ್ಲ ಮತ್ತು 50 ಕೋಟಿ ಹಣದ ವಿಚಾರವಾಗಿ ನನ್ನ ಬಳಿ ಯಾರು ಮಾತನಾಡಿಲ್ಲ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಹಣ ಆಪರ್‌ ನೀಡಲಾಗಿತ್ತು. ಈ ಬಗ್ಗೆ ಶಾಮನೂರು ಶಿವಶಂಕರಪ್ಪರನ್ನು ಬಿಜೆಪಿಯವರು ಸಂಪರ್ಕಿಸಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಶಾಸಕ ಶಾಮನೂರು ಸ್ಪಷ್ಟನೆ ನೀಡಿದರು‌‌.

ಬಿಜೆಪಿಯವರ ಬಳಿ ದುಡ್ಡು ಅಂತು ಇದೆ. ರಾಜ್ಯ ಸಭೆ ಚುನಾವಣಾ ಸಂದರ್ಭದಲ್ಲಿ ಅವರು ಮತ ಕೇಳಿದ್ದು ನಿಜ, ನಮಗೆ ಮತ ಕೊಡಿ ಎಂದಿದ್ದರು. ಹಣದ ಬಗ್ಗೆ ಯಾರು ಮಾತನಾಡಿಲ್ಲ, ಅದೆಲ್ಲಾ ಸುಳ್ಳು. ಡಿಕೆಶಿ ಹಾಗೇ ಹೇಳಿದ್ದರೆ ಅವರನ್ನೇ ಕೇಳಿ ಯಾವ ಬಿಜೆಪಿ ಮುಖಂಡರು ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಸಂಪರ್ಕ ಮಾಡಿಲ್ಲ ಎಂದು ಹೇಳಿದರು.

ಚುನಾವಣೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಅಭ್ಯರ್ಥಿ ಇನ್ನು ಯಾರು ಸ್ಪರ್ಧೆ ಮಾಡಬೇಕೆಂದು ನಿರ್ಧಾರ ಆಗಿಲ್ಲ. ಹೈಕಮಾಂಡ್ ಟಿಕೇಟ್ ಘೋಷಣೆ ಮಾಡುವವರಿಗೆ ಕಾಯಿರಿ, ಎಸ್. ಎಸ್ ಮಲ್ಲಿಕಾರ್ಜುನ ಸ್ಪರ್ಧಿಸುತ್ತಾರೋ ಅಥವಾ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಸ್ಪರ್ಧೆ ಮಾಡುತ್ತಾರೋ ಈಗಲೇ ಹೇಳುವುದಕ್ಕೆ ಆಉವುದಿಲ್ಲ ಎಂದು ಶಾಮನೂರು ಗುಟ್ಟುಬಿಡಲು ಒಪ್ಪಲಿಲ್ಲ.

Exit mobile version