Home ತಾಜಾ ಸುದ್ದಿ ಸರ್ಕಾರಿ ಬಸ್ ಪಲ್ಟಿ: ಹಲವರಿಗೆ ಗಾಯ

ಸರ್ಕಾರಿ ಬಸ್ ಪಲ್ಟಿ: ಹಲವರಿಗೆ ಗಾಯ

0

ಬೈಲಹೊಂಗಲ: ತಾಲೂಕಿನ ಅರವಳ್ಳಿ ಗ್ರಾಮದ ಸನಿಹ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸರ್ಕಾರಿ ಬಸ್ ಪಲ್ಟಿಯಾದ ಘಟನೆ ಸೋಮವಾರ ಜರುಗಿದೆ.
ಸಾರಿಗೆ ಬಸ್ ಏಣಗಿ ಗ್ರಾಮದಿಂದ ಬೈಲಹೊಂಗಲ ಕಡೆ ಹೊರಟ ಬಸ್ ಲಿಂಗದಳ್ಳಿ ಮಾರ್ಗವಾಗಿ ಹೋಗುವಾಗ ಅರವಳ್ಳಿ ಸನಿಹ ಉರುಳಿ ಬಿದ್ದಿದೆ. ಬಸ್ಸಿನಲ್ಲಿದ್ದ ಸುಮಾರು ೧೦ ರಿಂದ ೧೫ ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು ಅರವಳ್ಳಿ ಗ್ರಾಮಸ್ಥರ ಸಹಕಾರ ಹಾಗೂ ೧೦೮ ಆಂಬುಲೆನ್ಸ್ ಮೂಲಕ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version