Home ಅಪರಾಧ ಕುಡಿದು ಕಿರಿಕಿರಿ ಮಾಡಿದ ಗೌಂಡಿಯ ಹತ್ಯೆ

ಕುಡಿದು ಕಿರಿಕಿರಿ ಮಾಡಿದ ಗೌಂಡಿಯ ಹತ್ಯೆ

0

ಬೆಳಗಾವಿ: ಕಟ್ಟಡ ನಿರ್ಮಾಣ ಕೆಲಸಕ್ಕೆ ಬಂದ ಗೌಂಡಿ ಹಾಗೂ ಮನೆ ಮಾಲೀಕನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೈಲಹೊಂಗಲ ತಾಲೂಕಿನ ದೊಡವಾಡದಲ್ಲಿ ನಡೆದಿದೆ.
ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಗುಡಿಕಟ್ಟೆ ಗ್ರಾಮದಲ್ಲಿ ಬಸವರಾಜ ಕಲ್ಲಯ್ಯ ಪೂಜಾರ ಎಂಬುವರು ತಮ್ಮ ಮನೆ ನಿರ್ಮಾಣ ಕೆಲಸಕ್ಕಾಗಿ ಬಾಗಲಕೋಟೆ ಕಟಗೇರ ಗ್ರಾಮದ ಬಸವರಾಜ ಕುಂಬಾರ ಎಂಬುವರನ್ನು ನೇಮಿಸಿದ್ದರು. ಕುಡಿದು ಕೆಲಸಕ್ಕೆ ಬಂದ ಕುಂಬಾರ ಮನೆ ಮಾಲೀಕನ ಜತೆ ಜಗಳ ಕಾಯ್ದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡುವ ಮಟ್ಟಕ್ಕೆ ಹೋಗಿದೆ.
ಅಂತರ ಜಿಲ್ಲಾ ಕುಸ್ತಿಪಟುವಾಗಿದ್ದ ಮನೆ ಮಾಲೀಕ ಬಸವರಾಜ ಪೂಜಾರ ಈ ಸಂದರ್ಭದಲ್ಲಿ ತನ್ನ ವಿರುದ್ಧ ಮಾತನಾಡಿದ ಬಸವರಾಜ ಕುಂಬಾರನನ್ನು ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ತಾನೇ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸುತ್ತಿದ್ದಾರೆ.

Exit mobile version