ನವಿ ಮುಂಬೈ: ಮುಂಬೈ -ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಖೋಪೋಲಿ ನಿರ್ಗಮನದ ಬಳಿ ವಾಹನಗಳು ಢಿಕ್ಕಿ ಹೊಡೆದು ಕನಿಷ್ಠ ಏಳು ಕಾರುಗಳು ಮತ್ತು ಒಂದು ಟ್ರಕ್ ಜಖಂಗೊಂಡು ನಾಲ್ವರು ವಾಹನ ಸವಾರರು ಗಾಯಗೊಂಡಿದ್ದಾರೆ . ಗಾಯಾಳುಗಳನ್ನು ಕಾಮೋಥೆಯ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ . ಡಿಕ್ಕಿಯ ರಭಸಕ್ಕೆ ಒಂದು ಕಾರು ಪಲ್ಟಿ ಹೊಡೆದು ರಾಶಿಯಲ್ಲಿದ್ದ ಇನ್ನೊಂದು ಕಾರಿನ ಮೇಲೆ ಬಿದ್ದಿದೆ.
