Home ವೈವಿಧ್ಯ ಸಂಪದ ಸಜ್ಜನರ ಸಂಗ ಮುಕ್ತಿಗೆ ರಹದಾರಿ

ಸಜ್ಜನರ ಸಂಗ ಮುಕ್ತಿಗೆ ರಹದಾರಿ

0

ವೇದಗಳು ಸತ್ಸಂಗದ ಮಹತ್ವವನ್ನು ಬಹಳ ತಿಳಿಸಿಕೊಡುತ್ತವೆ. ಸಜ್ಜನರ ಸಂಗವು, ಜೀವನದ ಪರಮೋನ್ನತಿಯ ಸಾಧನವಾಗಿದೆ ಎಂದು ಶಾಸ್ತ್ರಗಳು ಉಪದೇಶಿಸುತ್ತವೆ.
ವೇದ, ಉಪನಿಷತ್ತುಗಳು ಹಾಗೂ ಭಗವದ್ಗೀತೆಯಂತಹ ಪವಿತ್ರ ಗ್ರಂಥಗಳು ಸತ್ಸಂಗದ ಪ್ರಭಾವವನ್ನು, ಸಜ್ಜನರ ಸಂಗದಿಂದ ಆಗುವ ಉಪಯೋಗಗಳನ್ನು ಸ್ಪಷ್ಟವಾಗಿ ತಿಳಿಸಿಕೊಡುತ್ತವೆ. ಹಾಗಾದರೆ ಸಜ್ಜನರು ಯಾರು ಎಂದರೆ, ಸತ್ಯ, ಧರ್ಮ, ಶಾಂತಿ, ಭಕ್ತಿ, ದಯೆ, ಸಹನಶೀಲತೆ, ಪರೋಪಕಾರ, ಅಹಂಕಾರವಿಲ್ಲದವರು, ವಿನಮ್ರರು, ನೀತಿ ಇತ್ಯಾದಿ ಗುಣಗಳನ್ನು ಹೊಂದಿರುವವರು ಸಜ್ಜನರು.
ಒಳ್ಳೆಯ ಜನರ ಸಂಗವು ನಮ್ಮ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ಬೆಳಗಿಸುತ್ತದೆ. ಋಗ್ವೇದದಲ್ಲಿ ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಂ' ಅಂದ್ರೆ ಒಳ್ಳೆಯ ಸಮಾಜದಲ್ಲಿ ಸಜ್ಜನರ ಸಹವಾಸವಿದ್ದಲ್ಲಿ ವ್ಯಕ್ತಿಯ ಚಿಂತನೆ ಮತ್ತು ಜೀವನ ಶ್ರೇಷ್ಠಗೊಳ್ಳುತ್ತದೆ ಹಾಗೂ ಸಜ್ಜನರ ಸಂಗದಲ್ಲಿ ಸಾಗಿದಾಗ ಸಾಧನೆಯ ಮಾರ್ಗ ಸುಲಭದಲ್ಲಿ ದೊರೆಯುತ್ತದೆ. ಯಜುರ್ವೇದದಲ್ಲಿ ಹೇಳಿದಂತೆಅಸತ್ಯೇನತಪ್ಸ್ಯತೇ ಸತ್ಯೇನ ಪರಮಂ ಗಚ್ಛತಿ’ ಅಸತ್ಯದಿಂದ ತಪಸ್ಸು ಕ್ಷೀಣಗೊಳ್ಳುತ್ತದೆ, ಆದರೆ ಸತ್ಯದ ಮೂಲಕ ಮುಕ್ತಿಯನ್ನು ಪಡೆಯಬಹುದು. ಸತ್ಸಂಗವು ಸತ್ಯದ ಮಾರ್ಗವನ್ನು ತೋರಿಸುವ ಶ್ರೇಷ್ಠ ಸಾಧನವಾಗಿದೆ. ಒಳ್ಳೆಯವರ ಸಂಪರ್ಕದಲ್ಲಿದ್ದರೆ, ನಾವು ನಿಷ್ಠುರತೆಯನ್ನು ತೊರೆದು ಶಾಂತಿಯುತ ಜೀವನವನ್ನು ನಡೆಸಬಹುದು. ಒಳ್ಳೆಯ ಜನರ ಸಂಗದಿಂದ ನಮ್ಮ ಮನಸ್ಸು, ಮಾತು, ಹಾಗೂ ಕರ್ಮ ಪವಿತ್ರಗೊಳ್ಳುತ್ತದೆ. ಅಥರ್ವಣ ವೇದದಲ್ಲಿ ತಿಳಿಸಿದಂತೆ `ಪಾವಮಾನೀ ದಿವೋ ದಿವಃ ಪಾವಮಾನೀ ಪುನಾತು ನಃ’ ಸಜ್ಜನರಿಂದ ಬರುವ ಮಾತುಗಳು ನಮ್ಮ ಚಿತ್ತವನ್ನು ಶುದ್ಧಿಗೊಳಿಸುತ್ತವೆ. ಭಕ್ತರು ಪರಸ್ಪರ ಭಗವಂತನ ಬಗ್ಗೆ ಮಾತನಾಡುವಾಗ, ಹಾಡುವಾಗ, ಕುಣಿಯುವಾಗ, ಅವರಲ್ಲಿ ಆನಂದ ಹೆಚ್ಚುತ್ತದೆ.

Exit mobile version