Home News ಶ್ರೀರಾಮನ ಪಟ್ಟಾಭಿಷೇಕ ಹಿನ್ನೆಲೆ ಹೋಳಿ ಆಚರಿಸಿ ಕಾವೇರಿ ನದಿಯಲ್ಲಿ‌ ಸ್ನಾನ

ಶ್ರೀರಾಮನ ಪಟ್ಟಾಭಿಷೇಕ ಹಿನ್ನೆಲೆ ಹೋಳಿ ಆಚರಿಸಿ ಕಾವೇರಿ ನದಿಯಲ್ಲಿ‌ ಸ್ನಾನ

ಶ್ರೀರಂಗಪಟ್ಟಣ: ಪಟ್ಟಣದ ಪೂರ್ಣಯ್ಯ ಬೀದಿಯಲ್ಲಿನ ಶ್ರೀ ಪಟ್ಟಾಭಿರಾಮನ ದೇವಾಲಯದಲ್ಲಿ ಶ್ರೀರಾಮನ ಪಟ್ಟಾಭಿಷೇಕದ ಅಂಗವಾಗಿ ವಿಶೇಷ ಪೂಜೆಗಳು ಜರುಗಿ, ಹೋಳಿ ಆಚರಣೆ ಮೂಲಕ‌ ಇಲ್ಲಿನ ನಿವಾಸಿಗಳು ಸಂಭ್ರಮಿಸಿದರು.
ವೇಧ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಇಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪಟ್ಟಾಭಿಷೇಕ ಶಾಸ್ತ್ರೋತ್ರವಾಗಿ ನೆರೆವೇರಿಸಲಾಯಿತು.
ಶ್ರೀರಾಮನ ಪಟ್ಟಾಭಿಷೇಕ ಪೂಜಾ ಕಾರ್ಯಕ್ರಮದಲ್ಲಿ ಬೀದಿಯ ಎಲ್ಲಾ ನಿವಾಸಿಗಳು ಹಾಗೂ ಶ್ರೀ ರಾಮನ ಭಕ್ತರು ಭಾಗವಹಿಸಿ ಸಂಭ್ರಮಿಸಿದರು.
ಬಳಿಕ ಶ್ರೀರಾಮನ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದ ಜನತೆ, ನಂತರ ಬಾಲರಾಮನನ್ನು ತೊಟ್ಟಿಲಲ್ಲಿ ಮಲಗಿಸಿ ಉಯ್ಯಾಲೆ ಮೂಲಕ ಬೀದಿಯಲ್ಲಿ ಮೆರವಣಿಗೆ ನಡೆಸಿ ಸಂಭ್ರಮದ ಹೋಳಿ ಆಚರಣೆ ಮಾಡಿದರು.

Exit mobile version