Home ನಮ್ಮ ಜಿಲ್ಲೆ ಮನೆಗಳ್ಳತನಕ್ಕೆ ವಿಫಲ ಯತ್ನ

ಮನೆಗಳ್ಳತನಕ್ಕೆ ವಿಫಲ ಯತ್ನ

0

ಶ್ರೀರಂಗಪಟ್ಟಣ: ಮನೆಗಳ್ಳತನಕ್ಕೆ ಯತ್ನಿಸಿ ವಿಫಲಗೊಂಡಿರುವ ಘಟನೆ ಶ್ರೀರಂಗಪಟ್ಟಣ ಹೊರವಲಯದ ಸುಮುಖ ಲೇಔಟ್‌ನ ಶ್ರೀ ನಿಮಿಷಾಂಬ ನಿಲಯದಲ್ಲಿ ಶನಿವಾರ ಮದ್ಯ ರಾತ್ರಿ ನಡೆದಿದೆ.
ಕೆಳ ಅಂತಸ್ತಿನಲ್ಲಿ‌ ಮನೆ ಬಾಡಿಗೆದಾರರು ಇಲ್ಲದಿರುವುದನ್ನು ಅರಿತ ಖದೀಮರು, ಶನಿವಾರ ಮದ್ಯರಾತ್ರಿ ಬಾಗಿಲು ಮುರಿಯುವ ವಿಫಲ ಯತ್ನ ನಡೆಸಿದ್ದಾರೆ. ಅಲ್ಲದೆ ಮೇಲಂತಸ್ಥಿನ ಮನೆಯವರು ಹೊರಗಡೆ ಬಾರದಂತೆ ಹೊರಗಡೆಯಿಂದ ಬಾಗಿಲಿನ ಚಿಲಕವನ್ನು ಹಾಕಿದ್ದು ಬಾಗಿಲು ಹೊಡೆಯುವ ಶಬ್ದಕ್ಕೆ ಅಕ್ಕ-ಪಕ್ಜದವರು ಓಡಿ ಬರಲಾಗಿ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು,‌ ಖದೀಮರನ್ನು ಸೆರೆ ಹುಡಿಯುವುದರ ಜೊತೆಗೆ ರಕ್ಷಣೆ ನೀಡುವಂತೆ ನಿವಾಸಿಗಳು ಮನವಿ‌ ಮಾಡಿದ್ದಾರೆ.

Exit mobile version