Home ತಾಜಾ ಸುದ್ದಿ ವಿರೋಧ ಪಕ್ಷ ನಾಯಕತ್ವಕ್ಕೆ ಮೊದಲು ರಾಜೀನಾಮೆ ಕೊಡಲಿ

ವಿರೋಧ ಪಕ್ಷ ನಾಯಕತ್ವಕ್ಕೆ ಮೊದಲು ರಾಜೀನಾಮೆ ಕೊಡಲಿ

0

ಮಂಡ್ಯ: ಮಂದಿನ ವರ್ಷ ದಸರಾ ನಿರ್ವಿಘ್ನವಾಗಿ ಮಾಡಲು ಅವಕಾಶ ಕೊಡವ್ವ ಎಂದು ಕೇಳಿಕೊಂಡಿದ್ದಾರೆ. ಅಧಿಕಾರ ಹಂಚಿಕೆ ವಿಚಾರ ನಮ್ಮಲ್ಲಿ ಚರ್ಚೆ ಇಲ್ಲ. ನಾನು ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಪರೋಕ್ಷ ಪ್ರಭಾವವಿದೆ ಎಂದು ದೂರು ಕೊಟ್ಟಿದ್ದಾರೆ. ನೇರವಾಗಿ ಅದರ ಹೊಣೆ ಹೊತ್ತ ಅಶೋಕ್, ವಿಜಯೇಂದ್ರ, ಕುಮಾರಸ್ವಾಮಿ ಇದರಲ್ಲಿದ್ದಾರೆ. ಅವರ ಹೆಸರಗಳು ತಳುಕು ಹಾಕಿಕೊಳ್ತಿಲ್ಲ. ಕೇವಲ ಸಿದ್ದರಾಮಯ್ಯ ಹೆಸರು ಮಾತ್ರ ಕೇಳಿ ಬರ್ತಿದೆ. ವಿರೋಧ ಪಕ್ಷದ ನಾಯಕರೇ ಹೇಳಿದ ಮೇಲೆ ಅವರ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಲಿ ಎಂದರು, ಇನ್ನು ವಿರೋದ ಪಕ್ಷದ ನಾಯಕ ಆರ್‌ ಅಶೋಕ ಅವರು ಸಿಎಂ ರಾಜೀನಾಮೆ ಕೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು ಆರ್. ಅಶೋಕ್ ಮೊದಲು ರಾಜೀನಾಮೆ ಕೊಡಲಿ. ಅವರ ವಿಚಾರಕ್ಕೂ ಸಿದ್ದರಾಮಯ್ಯ ವಿಚಾರಕ್ಕೂ ವ್ಯತ್ಯಾಸವಿದೆ. ವಿರೋಧ ಪಕ್ಷ ನಾಯಕತ್ವಕ್ಕೆ ಮೊದಲು ರಾಜೀನಾಮೆ ಕೊಡಲಿ. ಕಾನೂನು ಏನಿದೆ ಅದರ ಪ್ರಕಾರ ನಮ್ಮ ನಾಯಕರು ನಡೆದುಕೊಳ್ತಾರೆ. ಅಶೋಕ್‌ನದು ಎನ-ಏನಿದೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.

Exit mobile version