Home News ವಿಮಾನ ದುರಂತ: ನ್ಯಾಯಾಂಗ ತನಿಖೆಗೆ ಆಗ್ರಹ

ವಿಮಾನ ದುರಂತ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಅಹಮದಾಬಾದ್ ವಿಮಾನ ದುರಂತ ಪ್ರಕರಣವನ್ನು ಕೇಂದ್ರ ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಸಚಿವ ಎಚ್.‌ಕೆ. ಪಾಟೀಲ್ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದವರು ಅವರು, ದೇಶದ ದೊಡ್ಡ ದುರಂತದ ಸಂದರ್ಭದಲ್ಲಿ ನಮ್ಮ ಅಧ್ಯಕ್ಷರು ನ್ಯಾಯಂಗ ತನಿಖೆಗೆ ಆಗ್ರಹ ಮಾಡಿದ್ದಾರೆ. ಪ್ರಧಾನಿ ಈ ವಿಚಾರದಲ್ಲಿ ತಕ್ಷಣ ಸ್ಪಂದಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಉಳಿದ ರಾಷ್ಟ್ರಕ್ಕಿಂತ ನಮ್ಮಲ್ಲೊ ತಾಂತ್ರಿಕ ಮೇಲ್ವಿಚಾರಣೆ ಕಡಿಮೆ ಇದೆವೆಂದು ಟೆಕ್ನಿಕಲ್ ಜನ ಹೇಳುತ್ತಿದ್ದು, ಆ ಮಾತು ಬರದ ಹಾಗೆ , ಅಭಿವೃದ್ಧಿ ಹೊಂದಿದ ದೇಶದಲ್ಲಿ ಟೆಕ್ನಿಕಲ್ ಮಾನಿಟರ್ ಹೇಗೆ ಮಾಡುತ್ತಾರೆ ಅದು ನಮ್ಮಲ್ಲಿ ಕೂಡ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಆರ್.ಸಿ.ಬಿ. ಕಾಲ್ತುಳಿತ ಘಟನೆ ಪ್ರತಿಯೊಬ್ಬ ಕನ್ನಡಿಗನಿಗೂ ನೋವು ಇದೆ. ಹಲವು ಸಂದರ್ಭದಲ್ಲಿ ಕಾಲ್ತುಳಿತ ಆಗುತ್ತೆ , ಇಲ್ಲಿ ಬಹಳ ಜನರಿಗೆ ಗಾಯ ಆಗಿ ಸಾವು ಆಗಿವೆ. ಕ್ರೌಡ್ ಮ್ಯಾನೆಜ್‌ಮೆಂಟ್‌ ಮಾಡೋ ಸಲುವಾಗಿ ವಿಶೇಷ ಕಾನೂನಿನ ಅವಶ್ಯಕತೆ ಇದೆ. ಈ ಕಾನೂನು ಮಾಡೋದಕ್ಕೆ ನಮ್ಮ ಇಲಾಖೆ ಕರುಡು ಮಸೂದೆ ಸಿದ್ಧ ಮಾಡಿದೆ. ಮುಂದಿನ‌ ವಾರದಲ್ಲಿ ಕ್ಯಾಬಿನೇಟ್ ಗಮನಕ್ಕೆ ತಂದು ಒಪ್ಪಿದ್ರೆ ಕಾರ್ಯರೂಪಕ್ಕೆ ಬರುತ್ತೆ ಎಂದರು.
ಕ್ರೌಡ್ ಕಂಟ್ರೋಲ್ ಸೇರಿ ಹಲವು ವಿಚಾರದ ಬಗ್ಗೆ ಪರಿಹಾರ ಕಂಡು ಹಿಡಿಯಲು ಕಾನೂನು ಮಾಡಲಾಗುತ್ತಿದೆ. ರೇಸ್ ಕೋರ್ಸ್ ಸ್ಥಳಾಂತರ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ. ಸಿಎಂ ಅವರು ರೇಸ್ ಕೋರ್ಸ್ ಅವರನ್ನ ಕರೆದು ಮಾತಾಡಿದ್ದಾರೆ. ಸ್ಟೇಡಿಯಂ ಕೂಡ ಬೇರೆ ಕಡೆ ಸ್ಥಳಾಂತರ ಮಾಡಬೇಕು ಅನ್ನೋ ಚರ್ಚೆ ನಡೆದಿದೆ ಎಂದರು.

ಕಲಬುರಗಿ ಆವೃತ್ತಿ ರಜತ ಸಂಭ್ರಮ
Exit mobile version