Home ಸುದ್ದಿ ದೇಶ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ

ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ

0
c-295

ನವದೆಹಲಿ: ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿರುವ ಸಿ–295 ಸರಕು ಸಾಗಣೆ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ವಡೋದರಾದಲ್ಲಿ ಇಂದು (ಅ.30) ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಯುರೋಪ್‌ನ ಏರ್‌ಬಸ್‌ ಸಂಸ್ಥೆ ಹಾಗೂ ಭಾರತದ ಟಾಟಾ ಸಂಸ್ಥೆಯ ಪಾಲುದಾರಿಕೆಯಲ್ಲಿ ವಿಮಾನವನ್ನು ತಯಾರಿಸಲಾಗುತ್ತದೆ ಘಟಕದ ನಿರ್ಮಾಣಕ್ಕಾಗಿ ಏರ್‌ಬಸ್‌ನೊಂದಿಗೆ ₹21,935 ಕೋಟಿ ಮೊತ್ತದ ಒಪ್ಪಂದವನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಮಾಡಿಕೊಳ್ಳಲಾಗಿತ್ತು. ಯೋಜನೆ ಅಡಿ ಒಟ್ಟು 56 ವಿಮಾನಗಳನ್ನು ತಯಾರಿಸಲಾಗುತ್ತದೆ.
‘ವಾಯುಯಾನ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಒಂದು. ಮುಂಬರುವ 10-15 ವರ್ಷಗಳಲ್ಲಿ, ಭಾರತಕ್ಕೆ 2,000 ಪ್ರಯಾಣಿಕ ಮತ್ತು ಸರಕು ಸಾಗಣೆ ವಿಮಾನಗಳು ಬೇಕಾಗುತ್ತವೆ. ನಾವು ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದೇವೆ ಎಂಬುದನ್ನು ಇದು ಪ್ರತಿಬಿಂಬಿಸುತ್ತಿದೆ’ ಎಂದು ಅವರು ತಿಳಿಸಿದರು.

Exit mobile version