Home ತಾಜಾ ಸುದ್ದಿ ವಿದ್ಯುತ್ ಪೂರೈಕೆ ಮತ್ತಷ್ಟು ಸಲೀಸು

ವಿದ್ಯುತ್ ಪೂರೈಕೆ ಮತ್ತಷ್ಟು ಸಲೀಸು

0

ವಿಜಯಪುರ: ಬಬಲೇಶ್ವರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮತ್ತಷ್ಟು ಸುಗಮವಾಗಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.


ಬಬಲೇಶ್ವರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯುತ್ ಪರಿವರ್ತಕಗಳ ದುರಸ್ಥಿ ಹಾಗೂ ಪರೀಕ್ಷಣಾ ಕೇಂದ್ರ (ಪವರ್ ಸ್ಟೇಷನ್) ಉದ್ಘಾಟನೆ ನೆರವೇರಿಸಿ ಮಾತನಾಡಿರುವ ಅವರು ರೈತರ ತೋಟಗಳಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಸುಟ್ಟರೇ ದುರಸ್ತಿಗಾಗಿ ವಿಜಯಪುರಕ್ಕೆ ಬರಬೇಕಾಗಿತ್ತು ಆ ಸಮಸ್ಯೆಯೂ ನೀಗಲಿದೆ. ಗೃಹಬಳಕೆ ಮತ್ತು ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಲಭ್ಯವಾಗಿ, ಕೃಷಿಗೂ ನೆರವಾಗಿ, ನಮ್ಮೆಲ್ಲ ರೈತರ ಬದುಕು ಇನ್ನಷ್ಟು ಹಸನಾಗಲಿದೆ ಎಂದರು.

Exit mobile version