Home ನಮ್ಮ ಜಿಲ್ಲೆ ಗದಗ ವಂಶಿಕಾ ಎಂದು ನಾಮಕರಣ ಮಾಡಿದ ಬೊಮ್ಮಾಯಿ

ವಂಶಿಕಾ ಎಂದು ನಾಮಕರಣ ಮಾಡಿದ ಬೊಮ್ಮಾಯಿ

0

ಬೆಂಗಳೂರು: ಹನುಮಂತ ಸಿಂಗನಹಳ್ಳಿಯವರ ಮೊಮ್ಮಗಳಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ವಂಶಿಕಾ” ಎಂದು ನಾಮಕರಣ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಇದೊಂದು ಸುಯೋಗವೇ ಸರಿ. ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವ ಸಂದರ್ಭದಲ್ಲಿ ಶ್ರಮಿಕ ವರ್ಗದ ಆಟೋ ಚಾಲಕರ ಮೊಮ್ಮಗಳಿಗೆ ನಾಮಕರಣ ಮಾಡುವ ಸೌಭಾಗ್ಯ ನನಗೆ ದೊರೆಯಿತು.
ಗದಗ ನಗರದ ಆಟೋ ಚಾಲಕರ ಸಂಘಟನಾ ಕಾರ್ಯದರ್ಶಿಯಾದ ಹನುಮಂತ ಸಿಂಗನಹಳ್ಳಿಯವರ ಮೊಮ್ಮಗಳಿಗೆ “ವಂಶಿಕಾ” ಎಂದು ನಾಮಕರಣ ಮಾಡಿ, “ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು”ಎಂದು ಆಶೀರ್ವದಿಸಿದೆ ಎಂದಿದ್ದಾರೆ.

Exit mobile version