Home News ರೋಹನ್ ಮೀರ್‌ಚಂದಾನಿ ಹೃದಯಾಘಾತದಿಂದ ನಿಧನ

ರೋಹನ್ ಮೀರ್‌ಚಂದಾನಿ ಹೃದಯಾಘಾತದಿಂದ ನಿಧನ

ಮೈಸೂರು: ಭಾರತದ ಪ್ರಮುಖ ಗ್ರೀಕ್ ಮೊಸರು ಬ್ರ್ಯಾಂಡ್ ಎಪಿಗಾಮಿಯಾದ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಪಿಗಾಮಿಯಾದ ಮೂಲ ಕಂಪನಿಯಾದ ಡ್ರಮ್ಸ್ ಫುಡ್ ಇಂಟರ್‌ನ್ಯಾಶನಲ್‌ನಿಂದ ಅಧಿಕೃತ ಹೇಳಿಕೆಯಿಂದ ಸುದ್ದಿ ದೃಢೀಕರಿಸಲ್ಪಟ್ಟಿದೆ. ಅವರು ಡಿಸೆಂಬರ್ 21 ರಂದು ತಮ್ಮ 42 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾದರು ಎಂದು ತಿಳಿಸಿದೆ.
ರೋಹನ್‌ ಅವರು ಡ್ರಮ್ಸ್ ಫುಡ್ ಇಂಟರ್‌ನ್ಯಾಷನಲ್‌ ಪ್ರೈವೇಟ್ ಲಿಮಿಟೆಡ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದರು. ಎನ್‌ವೈಯು ಸ್ಟರ್ನ್ ಮತ್ತು ವಾರ್ಟನ್ ಸ್ಕೂಲ್‌ನ ಹಳೆ ವಿದ್ಯಾರ್ಥಿಯಾಗಿರುವ ರೋಹನ್ 2013 ರಲ್ಲಿ ಡ್ರಮ್ಸ್ ಫುಡ್ ಇಂಟರ್‌ನ್ಯಾಷನಲ್‌ ಸಂಸ್ಥೆ ಸ್ಥಾಪಿಸಿದ್ದರು.

Exit mobile version