Home ತಾಜಾ ಸುದ್ದಿ ಯೋಗ ಗುರು ಶರತ್ ಜೋಯಿಸ್ ಪಾರ್ಥಿವ ಶರೀರ ಇಂದು ನಗರಕ್ಕೆ

ಯೋಗ ಗುರು ಶರತ್ ಜೋಯಿಸ್ ಪಾರ್ಥಿವ ಶರೀರ ಇಂದು ನಗರಕ್ಕೆ

0

ಮೈಸೂರು: ಅಮೆರಿಕದ ವರ್ಜೀನಿಯಾದಲ್ಲಿ ನ. 11ರಂದು ನಿಧನರಾದ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಹಾಗೂ ಮೈಸೂರಿನ ವಿವಿ ಮೊಹಲ್ಲಾ ನಿವಾಸಿ ಆರ್. ಶರತ್ ಜೋಯಿಸ್(53) ಅವರ ಪಾರ್ಥೀವ ಶರೀರವನ್ನು ಇಂದು ರಾತ್ರಿ ನಗರಕ್ಕೆ ತರಲಾಗುತ್ತಿದೆ.
ಪಾರ್ಥಿವ ಶರೀರವನ್ನು ಅವರ ನಿವಾಸ ‘ಸ್ವಾಧ್ಯಾಯ, 5ನೇ ಮುಖ್ಯ, ವಿವಿ ಮೊಹಲ್ಲಾದಲ್ಲಿ ಇರಿಸಲಾಗುತ್ತಿದ್ದು, ನಾಳೆ ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಬಹುದು.
ಮಧ್ಯಾಹ್ನ 1 ಗಂಟೆಯ ನಂತರ ಗೋಕುಲಂನಲ್ಲಿರುವ ಶ್ರೀ ರುದ್ರ ಅಂತ್ಯಸಂಸ್ಕಾರ ಚಾರಿಟೇಬಲ್ ಟ್ರಸ್ಟ್‌ನ ಚಿರಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಜೋಯಿಸ್ ಕುಟುಂಬ ತಿಳಿಸಿದೆ.

Exit mobile version