Home ತಾಜಾ ಸುದ್ದಿ ಮೈಸೂರು ಚಲೋ ಪಾದಯಾತ್ರೆ ಬ್ರೇಕ್

ಮೈಸೂರು ಚಲೋ ಪಾದಯಾತ್ರೆ ಬ್ರೇಕ್

0

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆಯ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ವೇಳೆ ಪೊಲೀಸ್‌ ಮತ್ತು ಎನ್‌ಡಿಎ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಮೈಸೂರಿನಲ್ಲಿ ಜನಾಂದೋಲನ ನಡೆದ ಹಿನ್ನಲೆಯಲ್ಲಿ ಸಿದ್ದಲಿಂಗಪುರದಲ್ಲಿ ಪಾದಯಾತ್ರೆ ತಡೆದ ಪೊಲೀಸರು 30 ನಿಮಿಷ ತಡವಾಗಿ ಹೋಗುವಂತೆ ಹೇಳಿದ್ದಾರೆ. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾರ್ಯಕರ್ತರ ಮನವೊಲಿಸಿ ಸ್ವಲ್ಪ ಸಮಯ ಕಾಯಿರಿ ಯಾವುದೇ ಗಲಾಟೆ ಮಾಡಬೇಡಿ. ಮತ್ತೆ ಪಾದಯಾತ್ರೆ ಆರಂಭಿಸೋಣ ಎಂದು ಹೇಳಿದ ಬಳಿಕ ಕಾರ್ಯಕರ್ತರು ಸ್ಥಳದಲ್ಲೇ ಕುಳಿತರು.

Exit mobile version