Home News ಮೂರು ಸಾವಿರ ಕೋಳಿಗಳ ಸಾವು

ಮೂರು ಸಾವಿರ ಕೋಳಿಗಳ ಸಾವು

ಹರಪನಹಳ್ಳಿ: ಕಳೆದೆರಡು ದಿನಗಳಲ್ಲಿ ಮೂರು ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಂಡಿಕೇರಿ ತಾಂಡಾದ ಕೋಳಿ ಫಾರ್ಮ್‌ನಲ್ಲಿ ಜರುಗಿದೆ.
ತಾಂಡಾದ ಪರಮೇಶ್ವರನಾಯ್ಕ ಹಾಗೂ ಶೋಭಾ ದಂಪತಿ ಕೋಳಿ ಫಾರ್ಮ್‌ನಲ್ಲಿ ಇದ್ದಕ್ಕಿದ್ದಂತೆ ಕೋಳಿಗಳು ಸಾವನ್ನಪ್ಪಲು ಪ್ರಾರಂಭವಾಯಿತು. ಎರಡು ದಿನದಲ್ಲಿ ಮೂರು ಸಾವಿರ ಕೋಳಿಗಳು ಸಾವಿಗೀಡಾಗಿವೆ.
ಪಶು ಇಲಾಖೆಯವರು ಒಂದು ಜೀವಂತ ಕೋಳಿ ಹಾಗೂ ಒಂದು ಸಾವನ್ನಪ್ಪಿದ ಕೋಳಿಯನ್ನು ಪರೀಕ್ಷೆಗೆಂದು ದಾವಣಗೆರೆಯ ಪ್ರಾಣಿಜನ್ಯ ಪಶು ಆಸ್ಪತ್ರೆಗೆ ಕಳಿಸಿದ್ದು, ಪರೀಕ್ಷೆ ನಡೆದ ನಂತರ ಹಕ್ಕಿಜ್ವರದಿಂದ ಸಾವನ್ನಪ್ಪಿಲ್ಲ, ಬಿಸಿಲಿನ ತಾಪಕ್ಕೆ ಸಾವನ್ನಪ್ಪಿವೆ ಎಂದು ಲ್ಯಾಬ್‌ನವರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ವಿಷಪೂರಿತ ಆಹಾರ ಸೇವನೆಯಿಂದ ಸಾವನ್ನಪ್ಪಿವೆ ಎಂದು ಲ್ಯಾಬ್‌ನವರು ಹೇಳಿದ್ದಾರೆ ಎಂದು ಕೋಳಿ ಫಾರ್ಮ್‌ನ ಮಾಲಿಕರು ಹೇಳುತ್ತಾರೆ. ಈ ಬಗ್ಗೆ ಪಶು ಇಲಾಖೆಯ ವೈದ್ಯರು ಸಾರ್ವಜನಿಕರ ಆತಂಕವನ್ನು ನಿವಾರಿಸಬೇಕಿದೆ.

Exit mobile version