Home ತಾಜಾ ಸುದ್ದಿ ಮರಾಠಿ ಪುಂಡಾಟಿಕೆಗೆ ಕರವೇ ಪ್ರತ್ಯುತ್ತರ

ಮರಾಠಿ ಪುಂಡಾಟಿಕೆಗೆ ಕರವೇ ಪ್ರತ್ಯುತ್ತರ

0

ಬಾಗಲಕೋಟೆ: ಮಹಾರಾಷ್ಟ್ರದ ಸೋಲಾಪುರದಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಚಾಲಕರ ಮೇಲೆ ಪುಂಡಾಟಿಗೆ ಮೆರದವರಿಗೆ ಕರವೇ ಕಾರ್ಯಕರ್ತರು ಜಿಲ್ಲೆಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ಹುನಗುಂದ ತಾಲೂಕಿನ ಕೂಡಲಸಂಗಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್ ತಡೆದು ಜೈ ಕರ್ನಾಟಕ ಎಂದು ಬರೆದಿದ್ದಲ್ಲದೇ ಚಾಲಕರು, ನಿರ್ವಾಹಕರಿಂದ ಜೈ ಕರ್ನಾಟಕ, ಜೈ ಕರವೇ, ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿಗೆ ಜೈ ಕಾರ ಹಾಕಿಸಿದ್ದಾರೆ.

ಸೋಮವಾರ ಜಿಲ್ಲೆಯಿಂದ ಸೋಲಾಪುರಕ್ಕೆ ತೆರಳಿದ್ದ ಬಸ್ ತಡೆದಿದ್ದ ಮರಾಠಿ ಪುಂಡರು ಬಾಗಲಕೋಟೆ ಜಿಲ್ಲೆ ಇಳಕಲ್ಲಿನ ಬಸ್ ತಡೆದು ಚಾಲಕ ಲಕ್ಷ್ಮಣ ಚಳಗೇರಿ ಅವರಿಗೆ ಕೇಸರಿ ಗುಲಾಲು ಎರಚಿ ಜೈ ಮಹಾರಾಷ್ಟ್ರ ಹೇಳಿಸಿದ್ದರು, ಅದಕ್ಕೆ ಪ್ರತಿಕಾರವಾಗಿ ಅದೇ ಡಿಪೋ ವ್ಯಾಪ್ತಿಯಲ್ಲಿ ‌ಮಹಾರಾಷ್ಟ್ರದ ಬಸ್ ತಡೆದು ಕರವೇ ಕಾರ್ಯಕರ್ತರು ಜೈ ಕರ್ನಾಟಕ ಹೇಳಿಸಿದ್ದಾರೆ.

Exit mobile version