Home ತಾಜಾ ಸುದ್ದಿ ಬಸ್ ನಲ್ಲಿದ್ದವರೂ ನೆರವಿಗೆ ಬರಲಿಲ್ಲ ಬೇಸರ ಹೊರಹಾಕಿದ ಚಾಲಕ

ಬಸ್ ನಲ್ಲಿದ್ದವರೂ ನೆರವಿಗೆ ಬರಲಿಲ್ಲ ಬೇಸರ ಹೊರಹಾಕಿದ ಚಾಲಕ

0

ಬಾಗಲಕೋಟೆ: ಮಹಾರಾಷಷ್ಟ್ರದ ಸೋಲಾಪುರದಲ್ಲಿ‌ ಮರಾಠಿ ಪುಂಡರಿಂದ ತೊಂದರೆ ಅನುಭವಿಸಿದ ಸಾರಿಗೆ ಸಂಸ್ಥೆ ಇಳಕಲ್ ಡಿಪೋದ ಚಾಲಕ ಲಕ್ಷಣ ಚಳಿಗೇರಿ ಅವರು ಸೋಮವಾರ ಸಂಜೆ ಸುರಕ್ಷಿತವಾಗಿ ಮರಳಿದ್ದಾರೆ. ಪುಂಡಾಟಿಕೆ ನಡೆಯೋವಾಗ ಬಸ್ ನಲ್ಲಿದ್ದ ಪ್ರಯಾಣಿಕರು ನೆರವಿಗೆ ಧಾವಿಸದಿರುವುದಕ್ಕೆ ತೀವ್ರ ಬೇಸರ ಹೊರಹಾಕಿದ್ದಾರೆ.

ಇಳಕಲ್ಲಿನಲ್ಲಿ ಮಾಧ್ಯಮಗಳೆದರು ಸೋಲಾಪುರದಲ್ಲಿ ಅನುಭವಿಸಿದ ಯಾತನೆಯನ್ನು ವಿವರಿಸಿದ ಅವರು ಸೋಲಾಪುರಕ್ಕೆ ತೆರಳಿ ವಾಪಸ್ಸಾಗುವಾಗ ಒಂದು ತಂಡ ಬಸ್ಸಿಗೆ ಅಡ್ಡಿಗಟ್ಟಿ ಏಕಾಏಕಿ ಬಾಗಿಲು ತೆಗೆದು ಕೆಳಗೆ ಇಳಿಸಿದರು. ಮರಾಠಿಯಲ್ಲಿ ಮಾತು ಆರಂಭಿಸಿದರು. ಅವರ ಕೈಯಲ್ಲಿ ಆಯುಧಗಳಿದ್ದವು. ಜೈ ಮಹಾರಾಷ್ಟ್ರ ಎನ್ನುವಂತೆ ಒತ್ತಡ ಹಾಕಿದರು ಪ್ರಯಾಣಿಕರು ನೆರವಿಗೆ ಧಾವಿಸಲಿಲ್ಲ. ಜೈಕರ್ನಾಟಕ ಹೇಳಿ ಜೈ ಮಹಾರಾಷ್ಟ್ರ ಎಂದು ಅಲ್ಲಿಂದ ಸುರಕ್ಷಿತವಾಗಿ ಪ್ರಯಾಣಿಕರನ್ನು ಕರೆತಂದಿದ್ದೇನೆ ಎಂದರು.

Exit mobile version