ಬೆಳಗಾವಿ: ಮನೆ ಜಪ್ತಿ ಮಾಡಿ ಬಾಣಂತಿ ಹಾಗೂ ಕುಟುಂಬದವರನ್ನು ಹೊರಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಬೀಗ ತೆಗೆಸಿ ಬಾಣಂತಿ ಹಾಗೂ ಕುಟುಂಬವನ್ನು ಮನೆಯೊಳಗೆ ಸೇರಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.
ತಾರಿಹಾಳ ಗ್ರಾಮದಲ್ಲಿ ಫೈನಾನ್ಸ್ ಕಂಪನಿಯವರಿಂದ ಬಾಣಂತಿ ಹಾಗೂ ಕುಟುಂಬದವರ ಮನೆ ಜಪ್ತಿ ಮಾಡಲಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೂಚನೆಯಂತೆ ಅವರ ಆಪ್ತ ಸಹಾಯಕ ಮಹಾಂತೇಶ ಹಿರೇಮಠ ಅವರು ಖಾಸಗಿ ಹಣಕಾಸು ಸಂಸ್ಥೆಯವರ ಜೊತೆ ಸಂಧಾನ ನಡೆಸಿ ಮನೆಯ ಬೀಗ ತೆಗೆಸಿ ಬಾಣಂತಿ ಹಾಗೂ ಕುಟುಂಬವನ್ನು ಮನೆಯೊಳಗೆ ಸೇರಿಸಿದ್ದಾರೆ. ಅಲ್ಲದೇ ಅವರಿಗೆ ದಿನಸಿ ಮತ್ತು ಆರ್ಥಿಕ ನೆರವನ್ನೂ ನೀಡಿದ್ದಾರೆ.