Home ಅಪರಾಧ ಮರದ ಕೊಂಬೆ ಬಿದ್ದು ಬೈಕ್ ಸವಾರ ಸಾವು

ಮರದ ಕೊಂಬೆ ಬಿದ್ದು ಬೈಕ್ ಸವಾರ ಸಾವು

0

ಚಿಕ್ಕಮಗಳೂರು : ಬೈಕ್ ಸವಾರನ ಮೇಲೆ ಮರದ ಕೊಂಬೆ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಎಲೆಕಲ್ ಎಲೆಕಲ್ಲು ಬಳಿ ನಡೆದಿದೆ.

ಖಾಂಡ್ಯಾ ಹೋಬಳಿಯ ಕಡಬಗೆರೆ ನಿವಾಸಿಯಾದ ಅನಿಲ್ ರುಜಾರಿಯೋ (55) ಮರದ ಕೊಂಬೆ ಬಿದ್ದು ಮೃತಪಟ್ಟ ಬೈಕ್ ಸವಾರ. ಬೈಕ್ ನಲ್ಲಿ ತೆರಳುತ್ತಿದ್ದಾಗ ಏಕಾಏಕಿಮರದ ಕೊಂಬೆ ಅನಿಲ್ ರುಜಾರಿಯೋ ಮೇಲೆ ಬಿದ್ದಿದೆ.

ಆಂಬುಲೆನ್ಸ್ ಬರೋದು ತಡವಾಗುತ್ತೆಂದು ಅಗ್ನಿಶಾಮಕ ವಾಹನದಲ್ಲಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆಯಲ್ಲಿ ತೀವ್ರ ಗಾಯಗೊಂಡಿದ್ದ ಅನಿಲ್‌ ಸಾವನ್ನಪ್ಪಿದ್ದಾರೆ.

ಇನ್ನು ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಇದು 4ನೇ ಬಲಿಯಾಗಿದೆ.

Exit mobile version