Home ಅಪರಾಧ ಮತ ಪಡೆಯಲು ಮನೆಗೆ ಬಂದಾಗ ಪ್ರಾಣಬಿಟ್ಟ ಅಜ್ಜಿ

ಮತ ಪಡೆಯಲು ಮನೆಗೆ ಬಂದಾಗ ಪ್ರಾಣಬಿಟ್ಟ ಅಜ್ಜಿ

0
Oplus_131072

ಕೊಪ್ಪಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿರಿಯ ಮತದಾರರಿಂದ ಮತದಾನ ಮಾಡಿಸಿಕೊಳ್ಳಲು ಮನೆಯ ಬಾಗಿಲಿಗೆ ಅಧಿಕಾರಿಗಳು ಬಂದಾಗ ಅಜ್ಜಿಯೊಬ್ಬರು ನಿಧನರಾದ ಘಟನೆ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಹಲಗೇರಿ ಗ್ರಾಮದ ಪಾರ್ವತಮ್ಮ ದೊಡ್ಡಬಸಪ್ಪ ಸಜ್ಜನ (೯೫) ನಿಧನರಾದ ಅಜ್ಜಿ. ಸಹಾಯಕ ಚುನಾವಣಾಧಿಕಾರಿ, ತಾಪಂ ಇಓ ದುಂಡಪ್ಪ ತುರಾದಿ, ಪಿಡಿಓ ಅಶೋಕ ರಾಂಪೂರ ಹಾಗೂ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಮತ ಪಡೆಯಲು ಅಜ್ಜಿಯ ಮನೆಗೆ ಬಂದಿದ್ದ ಸಂದರ್ಭದಲ್ಲಿ ಅವರು ನಿಧನರಾಗಿದ್ದಾರೆ.

Exit mobile version