ಬಳ್ಳಾರಿ: ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಹಾಗೂ ಸಂಸದ ಇ.ತುಕಾರಾಂ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು.
ಸಂಡೂರು ಪಟ್ಟಣದಲ್ಲಿನ ಪೋಲಿಂಗ್ ಬೂತ್ ನಂ ೬೭ ರಲ್ಲಿನ ಜಿ.ಪಂ ಎಂಜಿನಿಯರಿಂಗ್ ಇಲಾಖೆ ಕಚೇರಿಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾವಣೆ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆ ಪತಿ, ಸಂಸದ ಇ.ತುಕಾರಾಂ ಮಕ್ಕಳಾದ ರಘುನಂದನ್, ಚೈತನ್ಯ ಸಾಥ್ ನೀಡಿದರು. ಎಲ್ಲರೂ ಒಟ್ಟುಗೂಡಿ ಹಕ್ಕು ಚಲಾವಣೆ ಮಾಡಿದರು.
ಪೂಜೆ: ಮತದಾನಕ್ಕೂ ಮುನ್ನ ಭೀಮತೀರ್ಥ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.