ಹುಬ್ಬಳ್ಳಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಹೋದರರಿಬ್ಬರ ನಡುವೆ ಜಗಳ ನಡೆದಿದ್ದು, ಬಿಡಿಸಲು ಹೋದ ತಾಯಿಗೆ ಮಗನೋರ್ವ ಗ್ಲಾಸ್‌ನಿಂದ ಇರಿದು ಕೊಲೆಗೈದ ಘಟನೆ ಇಲ್ಲಿನ ತೊರವಿ ಹಕ್ಕಲನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಪದ್ಮಾ ಶ್ರೀನಿವಾಸ ಚೇಲೂರ (46) ಮೃತಪಟ್ಟಿದ್ದಾರೆ. ಸಲೂನ್ ಶಾಪ್ ನಡೆಸುತ್ತಿದ್ದ ಸಹೋದರರಾದ ಮಂಜು ಮತ್ತು ಲಕ್ಷ್ಮಣ ಅವರು ಹಣಕಾಸಿನ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಪದ್ಮಾ ಅವರು ಬಿಡಿಸಲು ಹೋದಾಗ ಮಂಜು ಎಂಬಾತನು ಗ್ಲಾಸ್‌ನಿಂದ ಇರಿದಾಗ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಕಮರಿಪೇಟೆ ಠಾಣೆ ಪೊಲೀಸರು ತೆರಳಿ ಪರಿಶೀಲಿಸಿದ್ದು, ಶವವನ್ನು ಕೆಎಂಸಿಆರ್‌ಐನ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.