Home ಅಪರಾಧ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಸ್ಥಳದಲ್ಲೆ ಸಾವು

ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಸ್ಥಳದಲ್ಲೆ ಸಾವು

0

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಕ್ರಾಸ್ ಆನಂದ ಶಾಲೆ ಸಮೀಪ ಬಂಜಾರಾ ಹಿಲ್ಸ್ ದಾಬಾ ಬಳಿ ಮಹಿಂದ್ರಾ ಫಿಕಪ್ ಗೂಡ್ಸ್ ವಾಹನ ಹಾಗೂ ಕಾರ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೆ ನಾಲ್ವರು ಮೃತಪಟ್ಟ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ.

ಹೈದರಾಬಾದನ ಭಾರ್ಗವ ಕೃಷ್ಣ (55) ಇವರ ಪತ್ನಿ ಸಂಗೀತಾ (45), ಪುತ್ರ ಉತ್ತಮ ರಾಘವನ್ (28) ಎಂದು ತಿಳಿದು ಬಂದಿದೆ. ಇನ್ನೂರ್ವ ಚಾಲಕನಾಗಿದ್ದು ಗುರುತು ಪತ್ತೆಯಾಗಿಲ್ಲ.
ಇವರೆಲ್ಲರೂ ಹೈದರಾಬಾದ ನಿವಾಸಿಗಳಾಗಿದ್ದು ಗಾಣಗಾಪುರ ದತ್ತನ ದರ್ಶನಕ್ಕೆ ತೆರಳುತ್ತಿದ್ದರು. ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು ಕುಟುಂಬಸ್ಥರು ಬರುವವರೆಗೆ ನಿಖರ ಮಾಹಿತಿ ಗೊತ್ತಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ ಶಿವಶಂಕರ ಸಾಹು, ಮಹಾಗಾಂವ ಪಿಎಸ್ಐ ಆಶಾ ರಾಠೋಡ್, ಕುಪೇಂದ್ರ,ಕಿಶನ, ಹುಸೇನ ಪಟೇಲ ಮತ್ತಿತರರು ಸ್ಥಳಕ್ಕಾಗಮಿಸಿ ಮೃತ ದೇಹಗಳನ್ನು ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದರು, ವಾಹನ ಬದಿಗೆ ಸರಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.

Exit mobile version